Connect with us

Bengaluru City

ಇಂದಿನಿಂದ ಎಸ್‍ಎಸ್‍ಎಲ್‍ಸಿ, ಪಿಯುಸಿಗೆ ಕ್ಲಾಸ್ – ವಿದ್ಯಾಗಮ ತರಗತಿಯೂ ಸ್ಟಾರ್ಟ್

Published

on

– ಶಾಲಾ- ಕಾಲೇಜು ಆರಂಭಕ್ಕೆ ಮಾರ್ಗಸೂಚಿಗಳೇನು..?

ಬೆಂಗಳೂರು: ಬ್ರಿಟನ್ ವೈರಸ್ ಹಾವಳಿ ಮಧ್ಯೆ ಇಂದಿನಿಂದ ಶಾಲಾ-ಕಾಲೇಜು ಪ್ರಾರಂಭವಾಗಲಿದೆ. 10 ತಿಂಗಳ ಬಳಿಕ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಓಪನ್ ಆಗಲಿದ್ದು, ಮೊದಲ ಹಂತವಾಗಿ ಎಸ್‍ಎಸ್‍ಎಲ್‍ಸಿ, ಪಿಯುಸಿ ತರಗತಿ ಪ್ರಾರಂಭವಾಗಲಿದೆ. ಶಾಲಾ-ಕಾಲೇಜು ಪ್ರಾರಂಭ ಜೊತೆಗೆ 6-9 ನೇ ತರಗತಿಯವರೆಗೆ ವಿದ್ಯಾಗಮ ತರಗತಿಗಳು ಕೂಡ ಪ್ರಾರಂಭ ಆಗಲಿದ್ದು, ಶಿಕ್ಷಣ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ.

ಶಾಲಾ-ಕಾಲೇಜು ಪ್ರಾರಂಭಕ್ಕೆ ರೂಲ್ಸ್ ಗಳೇನು..?
ವಿದ್ಯಾರ್ಥಿಗಳಿಗೆ ಶಾಲೆಗೆ ಬರೋದು ಕಡ್ಡಾಯ ಅಲ್ಲ. ವಿದ್ಯಾರ್ಥಿಗಳಿಗೆ ಪೋಷಕರ ಒಪ್ಪಿಗೆ ಪತ್ರ ಹಾಗೂ ಆರೋಗ್ಯ ಪ್ರಮಾಣ ಪತ್ರ ಕಡ್ಡಾಯ. ನಿತ್ಯ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು. ಆರೋಗ್ಯ ವ್ಯತ್ಯಾಸ ಇರೋ ವಿದ್ಯಾರ್ಥಿಗಳಿಗೆ ಶಾಲೆಗೆ ಪ್ರವೇಶ ಇಲ್ಲ. ಪ್ರತಿ ಶಾಲೆಯಲ್ಲಿ ಐಸೋಲೇಷನ್ ಕೊಠಡಿ ತೆರೆಯಬೇಕು. ಸಾಮಾಜಿಕ ಅಂತರ, ಮಾಸ್ಕ್, ಫೇಸ್ ಶೀಲ್ಡ್ ಕಡ್ಡಾಯ ಧರಿಸಬೇಕು. ತರಗತಿ ಮುಗಿದ ಬಳಿಕ ಶಾಲಾ ಕೊಠಡಿಗಳು ಸ್ಯಾನಿಟೈಸ್ ಮಾಡಬೇಕು. ಪ್ರತಿ ತರಗತಿಗೆ 15 ವಿದ್ಯಾರ್ಥಿಗಳು ಮಾತ್ರ ಕೂರಿಸಬೇಕು. ಒಂದು ಬೇಂಚ್‍ಗೆ ಇಬ್ಬರು ವಿದ್ಯಾರ್ಥಿಗಳು ಮಾತ್ರ ಕೂರಬೇಕು.

ಶಾಲೆಯಲ್ಲಿ ಬಿಸಿಯೂಟ, ಕ್ಷೀರಭಾಗ್ಯದ ಹಾಲು ನೀಡುವಂತಿಲ್ಲ. ಬಿಸಿಯೂಟ ಬದಲು ವಿದ್ಯಾರ್ಥಿಗಳ ಮನೆಗೆ ಆಹಾರ ಪದಾರ್ಥಗಳನ್ನ ನೀಡಲು ಕ್ರಮ ಕೈಗೊಳ್ಳಲಾಗುವುದು. ಶಾಲಾ ಕ್ಯಾಂಪಸ್‍ಗೆ ಸಾರ್ವಜನಿಕರ ನಿಷೇಧ. ಕ್ಯಾಂಟಿನ್, ತಿಂಡಿ ಅಂಗಡಿಗಳನ್ನು ನಿಷೇಧಿಸಲಾಗುವುದು. ಶಿಕ್ಷಕರು, ಸಿಬ್ಬಂದಿಗೆ ಆರ್‍ಟಿಪಿಸಿಆರ್ ಟೆಸ್ಟ್ ರಿಪೋರ್ಟ್ ಕಡ್ಡಾಯ ಮಾಡಲಾಗುವುದು. 50 ವರ್ಷ ಮೇಲ್ಪಟ್ಟ ಶಿಕ್ಷಕರು, ಸಿಬ್ಬಂದಿ ಮಾಸ್ಕ್, ಫೇಸ್ ಶೀಲ್ಡ್ ಬಳಸಬೇಕು. ಶಾಲೆಯಲ್ಲಿ ಶೌಚಾಲಯ ಶುಚಿತ್ವಕ್ಕೆ ಕ್ರಮ ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಕಲಾಗುತ್ತದೆ.

ಇನ್ನು ದ್ವಿತೀಯ ಪಿಯುಸಿ ತರಗತಿಗೂ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಕಡ್ಡಾಯ ಮಾರ್ಗಸೂಚಿ ಪಾಲನೆಗೆ ಪಿಯು ಬೋರ್ಡ್ ಆದೇಶ ಹೊರಡಿಸಿದೆ.

ಪಿಯುಸಿ ಮಾರ್ಗಸೂಚಿಗಳೇನು..?
ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಮಾಡುವಂತೆ ಇಲ್ಲ. ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರ ಅನುಮತಿ ಪತ್ರ, ಕೊರೊನಾ ನೆಗೆಟಿವ್ ರಿಪೋರ್ಟ್ ತರಬೇಕು. ನಿತ್ಯ 45 ನಿಮಿಷಗಳ ಅವಧಿಯ 4 ತರಗತಿ ಮಾತ್ರ ಪಠ್ಯ ಬೋಧನೆ ಮಾಡಬೇಕು. ಪ್ರತಿ ತರಗತಿಗೆ 15 ವಿದ್ಯಾರ್ಥಿಗಳು ಮಾತ್ರ ಇರಬೇಕು. ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

ಕಾಲೇಜಿನಲ್ಲಿ ಬಯೋ ಮೆಟ್ರಿಕ್ ಹಾಜರಾತಿ ಬದಲು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯಲು 6 ಅಂತರದಲ್ಲಿ ಗುರುತು ಹಾಕಿ ಅಗತ್ಯ ಕ್ರಮವಹಿಸಬೇಕು. ಸಾಮೂಹಿಕ ಪ್ರಾರ್ಥನೆ, ಕ್ರೀಡಾ ಚಟುವಟಿಕೆಗಳಿಗೆ ನಿಷೇಧ ಹೇರಲಾಗುತ್ತದೆ. 50 ವರ್ಷ ಮೇಲ್ಪಟ್ಟ ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್, ಫೇಸ್ ಶೀಲ್ಡ್ ಬಳಸಬೇಕು. ಸ್ಕೂಲ್ ಬಸ್‍ಗಳಲ್ಲಿ ಅಗತ್ಯ ಸಾಮಾಜಿಕ ಅಂತರ, ಬಸ್ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆ ನಡೆಸಬೇಕು. ಕೊಠಡಿಗಳಿಗೆ ಸ್ಯಾನಿಟೈಸ್, ಶೌಚಾಲಯ ಶುಚಿತ್ವಕ್ಕೆ ಕ್ರಮವಹಿಸಬೇಕು.

Click to comment

Leave a Reply

Your email address will not be published. Required fields are marked *