Connect with us

Bengaluru City

ಸೆಲ್ಫಿಗಾಗಿ ಪರದಾಡಿದ ರಾಧಿಕಾ- ಬೇಸರಗೊಂಡು ವಿಡಿಯೋ ಮಾಡಿದ ಯಶ್, ಐರಾ

Published

on

ಬೆಂಗಳೂರು: ಪ್ರಸ್ತುತ ಇಬ್ಬರು ಮಕ್ಕಳ ಜೊತೆ ಕಾಲಕಳೆಯುತ್ತಿರುವ ನಟಿ ರಾಧಿಕಾ ಪಂಡಿತ್ ಹಲವು ದಿನಗಳ ಬಳಿಕ ಸೆಲ್ಫಿ ತೆಗೆದುಕೊಳ್ಳಲು ಪರದಾಡಿದ್ದಾರೆ.

ಹೌದು. ರಾಧಿಕಾ ಒಳ್ಳೆಯ ಬ್ಯಾಗ್ರೌಂಡ್‍ಗಾಗಿ ಪರದಾಡಿದ್ದಾರೆ. ಹೀಗೆ ರಾಧಿಕಾ ಆ ಕಡೆ ಈ ಕಡೆ ಕುಳಿತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಪತಿ ಯಶ್ ಹಾಗೂ ಮಗಳು ಐರಾ ಜೊತೆಗೂಡಿ ವಿಡಿಯೋ ಮಾಡಿದ್ದಾರೆ.

ಈ ವಿಡಿಯೋವನ್ನು ರಾಧಿಕಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಹುಡುಗಿಯರು ಸೆಲ್ಫಿ ತೆಗೆದುಕೊಳ್ಳುವಾಗ ಒಳ್ಳೆಯ ಬ್ಯಾಗ್ರೌಂಡ್‍ಗಾಗಿ ಹುಡುಕಾಡುತ್ತಾರೆ. ಹೇಗೆ ನಿಂತರೆ ಒಳ್ಳೆಯ ಫೋಟೋ ಬರುತ್ತೆ ಎಂದು ಯೋಚಿಸಿ ಫೋಟೋ ತೆಗೆಯುತ್ತಾರೆ. ಒಟ್ಟಾರೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ತುಂಬಾನೆ ಕಷ್ಟಕರ. ನಾನು ಪರದಾಡುತ್ತಿರುವುದನ್ನು ನೋಡಿ ಬೇಸರಗೊಂಡ ಅಪ್ಪ-ಮಗಳು ನನಗೆ ಗೊತ್ತಿಲ್ಲದೆ ವಿಡಿಯೋ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೆ ಯಶ್ ಮತ್ತು ರಾಧಿಕಾ ತಮ್ಮ ಮಗನಿಗೆ ನಾಮಕರಣ ಮಾಡಿದ್ದಾರೆ. ದಂಪತಿ ತಮ್ಮ ಫಾರ್ಮ್ ಹೌಸ್‍ನಲ್ಲೇ ಸರಳವಾಗಿ ನಾಮಕರಣ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ನಾಮಕರಣ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಯಶ್ ತಮ್ಮ ಮಗನಿಗೆ ಯಥರ್ವ್ ಯಶ್ ಎಂದು ಹೆಸರು ಇಟ್ಟಿದ್ದಾರೆ.

ಸದ್ಯಕ್ಕೆ ರಾಕಿಂಗ್ ದಂಪತಿ ತಮ್ಮ ಮಕ್ಕಳೊಂದಿಗೆ ಫಾರ್ಮ್ ಹೌಸ್‍ನಲ್ಲಿಯೇ ಕಾಲಕಳೆಯುತ್ತಿದ್ದಾರೆ. ಪಾರ್ಮ್ ಹೌಸ್‍ನಲ್ಲಿರುವ ಫೋಟೋವೊಂದು ರಾಧಿಕಾ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಯಶ್ ತಮ್ಮ ಮಗಳು ಐರಾಳ ಕೈಯಿಂದ ಹಸುವಿನ ಕರುವಿಗೆ ಬಾಳೆಹಣ್ಣು ತಿನ್ನಿಸುತ್ತಿರುವುದನ್ನು ಕಾಣಹುದಾಗಿದೆ. ರಾಧಿಕಾ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *