Connect with us

Bengaluru City

‘ಕ್ರಿಟಿಕಲ್ ಕೀರ್ತನೆಗಳು’ ಟ್ರೇಲರ್‌ಗೆ ಒಂದು ಮಿಲಿಯನ್ ಮೆಚ್ಚುಗೆ

Published

on

ಪಿಎಲ್ ಬೆಟ್ಟಿಂಗ್ ಸುತ್ತ ಹೆಣೆಯಲಾದ ಕಾಮಿಡಿ ಎಂಟಟೈನ್ಮೆಂಟ್ ಕಥಾಹಂದರವುಳ್ಳ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಬಿಡುಗಡೆಯ ಬಾಗಿಲಲ್ಲಿರುವ ಈ ಸಿನಿಮಾ ಟ್ರೇಲರ್ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಕಂಡು ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದ್ದು, ಟ್ರೇಲರ್ ಒಂದು ಮಿಲಿಯನ್ ವೀಕ್ಷಣೆ ಕಂಡು ಸಿನಿರಸಿಕರ ಮನ ಗೆದ್ದಿದೆ. ಚಿತ್ರದ ಪ್ರತಿ ಅಪ್‍ಡೇಟ್ ಮೇಲೆ ಸಿನಿ ಪ್ರೇಮಿಗಳು ತೋರುತ್ತಿರುವ ಪೋತ್ಸಾಹಕ್ಕೆ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದು, ಟ್ರೇಲರ್ ಒಂದು ಮಿಲಿಯನ್ ವೀಕ್ಷಣೆ ಕಂಡಿರುವುದು ಸಿನಿಮಾ ತಂಡಕ್ಕೆ ಹೊಸ ಹುರುಪು ನೀಡಿದೆ.

ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿರುವ ನವ ನಿರ್ದೇಶಕ ಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಸಿನಿಮಾ ಇದು. ಮೊದಲ ಸಿನಿಮಾದಲ್ಲಿ ಗೆಲುವು ದಾಖಲಿಸಿದ್ದ ನಿರ್ದೇಶಕ ಕುಮಾರ್ ಈ ಬಾರಿ ಐಪಿಎಲ್ ಬೆಟ್ಟಿಂಗ್ ಸಂಬಂಧಿಸಿದ ಕಥೆ ಹೆಣೆದು ಆಕ್ಷನ್ ಕಟ್ ಹೇಳಿದ್ದಾರೆ. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಈ ಚಿತ್ರದ ಕಥೆ ಹೆಣೆಯಲಾಗಿದ್ದು, ಬೆಟ್ಟಿಂಗ್ ದಂಧೆಯಿಂದಾಗುವ ಪರಿಣಾಮದ ಬಗ್ಗೆಯೂ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ. ಕಾಮಿಡಿ ಜೊತೆ ಭಾವನಾತ್ಮಕ ಅಂಶಗಳು ಸಿನಿಮಾದಲ್ಲಿದೆ.

ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಲ್ಲಿ ಎಲ್ಲರನ್ನು ನಗಿಸಿದ್ದ ತಬಲ ನಾಣಿ ಈ ಸಿನಿಮಾದಲ್ಲಿಯೂ ಇದ್ದಾರೆ. ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಬಣ್ಣ ಹಚ್ಚಿರುವ ತಬಲ ನಾಣಿ ಈ ಸಿನಿಮಾದಲ್ಲಿ ಕಾಮಿಡಿ ಪಂಚ್ ಮೂಲಕ ಇನ್ನಷ್ಟು ನಗಿಸಲಿದ್ದಾರೆ. ಸುಚೇಂದ್ರ ಪ್ರಸಾದ್, ತರಂಗ ವಿಶ್ವ, ರಾಜೇಶ್ ನಟರಂಗ, ಅಪೂರ್ವ, ಅರುಣಾ ಬಾಲರಾಜ್ ಸೇರಿದಂತೆ ಹಲವು ಕಲಾವಿದರು ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಾಡುಗಳು ಮೂಡಿ ಬಂದಿದ್ದು, ಶಿವ ಸೇನಾ ಮತ್ತು ಶಿವ ಶಂಕರ್ ಕ್ಯಾಮೆರಾ ನಿರ್ದೇಶನದಲ್ಲಿ ಸಿನಿಮಾ ಸೆರೆಯಾಗಿದೆ. ಕೇಸರಿ ಫಿಲಂಸ್ ಕ್ಯಾಪ್ಚರ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು ನಿರ್ದೇಶಕ ಕುಮಾರ್ ಹಾಗೂ ಸ್ನೇಹಿತರು ಚಿತ್ರಕ್ಕೆ ಬಂಡವಾಳ ಹೂಡಿ ಸಿನಿಮಾ ನಿರ್ಮಿಸಿದ್ದಾರೆ. ಸೆನ್ಸಾರ್‍ನಿಂದ ಯು/ಎ ಪ್ರಮಾಣಪತ್ರ ಪಡೆದುಕೊಂಡಿರುವ ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು ಚಿತ್ರತಂಡದಿಂದ ತೆರೆಗೆ ಬರುವ ಡೇಟ್ ಪ್ರಕಟವಾಗಬೇಕಿದೆ.

Click to comment

Leave a Reply

Your email address will not be published. Required fields are marked *