Connect with us

Bengaluru City

ಮಗನ ಸಾವಿನ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೇಸು ಹಾಕೋದಾಗಿ ಬೆದರಿಸಿದ ಖಾಸಗಿ ಆಸ್ಪತ್ರೆ

Published

on

– ಕೇಂದ್ರದ ಮಾಜಿ ಅಧಿಕಾರಿಗೆ ಬೆದರಿಕೆ
– ಇಂದು ಆಸ್ಪತ್ರೆಯಲ್ಲಿ ಮೃತಪಟ್ಟ ಮಗ

ಬೆಂಗಳೂರು: ಜ್ವರ ಎಂದು ನಗರದ ಖಾಸಗಿ ಆಸ್ಪತ್ರೆಗೆ ಸೇರಿದ ಒಬ್ಬ ಯುವಕ ಇಂದು ಮೃತಪಟ್ಟಿದ್ದಾನೆ. ಆತನ ಮರಣದ ಕುರಿತು ಆಸ್ಪತ್ರೆಯೊಂದಿಗೆ ವಿಚಾರಿಸಿದ ಯುವಕನ ಪೋಷಕರಿಗೆ ಆಸ್ಪತ್ರೆ ಸಿಬ್ಬಂದಿ ನಿಮ್ಮ ಮಗನ ಸಾವಿನ ಬಗ್ಗೆ ಕೇಳಿದರೆ ನಿಮ್ಮ ಮೇಲೆ ಕೇಸು ಹಾಕುದಾಗಿ ಬೆದರಿಕೆ ಹಾಕಿದ್ದಾರೆ.

ಕೇಂದ್ರದ ಮಾಜಿ ಅಧಿಕಾರಿಯಾಗಿದ್ದ ದಿವಾಕರ್ ಕೋರೆ ಅವರ ಮಗ ಅಲೋಕ್ ಜ್ವರ ಎಂದು ಅತ್ತಿಬೆಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ನಂತರ ಆತನಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆದರೆ ಇಂದು ದಿಢೀರ್ ಸಾವನ್ನಪ್ಪಿದ್ದಾನೆ ಎಂಬುದಾಗಿ ಆಸ್ಪತ್ರೆ ತಿಳಿಸಿದೆ ಎಂದು ಅಲೋಕ್‍ನ ತಾಯಿ ಜಯಶ್ರೀ ಮತ್ತು ತಂದೆ ದಿವಾಕರ್ ಕೋರೆ ಆಸ್ಪತ್ರೆಯ ಮುಂದೆ ಕಣ್ಣೀರಿಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ತಾಯಿ ಜಯಶ್ರೀ ಅವರು, ಜ್ವರದಲ್ಲಿ ಬಳಲುತ್ತಿದ್ದ ಮಗ ಬಿಬಿಎ ಪದವೀಧರ ಅಲೋಕ್ ಆಸ್ಪತ್ರೆಗೆ ಬಂದಿದ್ದ. ನಂತರ ನನ್ನನ್ನು ಇಲ್ಲಿ ಸಾಯಿಸುತ್ತಾರೆ ಎಂದು ವೀಡಿಯೋ ಮಾಡಿ ಕಳುಹಿಸಿದ್ದ. ಬಳಿಕ ಆಸ್ಪತ್ರೆಗೆ ಬಂದರೆ ಮಗನ ಬಗ್ಗೆ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ನಾವು ಮಗನನ್ನು ಬೇರೆ ಆಸ್ಪತ್ರೆಗೆ ಶಿಪ್ಟ್ ಮಾಡಿ ಎಂದು ಎರಡು ದಿನಗಳಿಂದ ಅಂಗಲಾಚಿದರೂ ಶಿಫ್ಟ್ ಮಾಡಲು ಆಸ್ಪತ್ರೆ ಒಪ್ಪಿರಲಿಲ್ಲ. ಆದರೆ ಇಂದು ಆತ ಮರಣ ಹೊಂದಿದ್ದಾನೆ ಎಂದು ನಮಗೆ ಗೊತ್ತಾಗಿದೆ ಎಂದರು.

ಬಿಬಿಎ ಪದವೀಧರನಾಗಿದ್ದ ಅಲೋಕ್ ನಮ್ಮ ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ. ಆದರೆ ಇಂದು ಆತನಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಮರಣ ಹೊಂದಿದ್ದಾನೆ. ಯಾವ ಕಾರಣಕ್ಕಾಗಿ ಮರಣಹೊಂದಿದ್ದಾನೆ ಎಂದು ಆಸ್ಪತ್ರೆಯಲ್ಲಿ ಕೇಳಿದರೆ ಅವರು ನಮ್ಮ ಮೇಲೆಯೇ ಕೇಸು ಹಾಕುದಾಗಿ ಬೆದರಿಸುತ್ತಿದ್ದಾರೆ ಎಂದು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *