Bengaluru City
ಬೆಂಗಳೂರಲ್ಲಿ ಪೊಲೀಸ್ ದಂಪತಿ ಆತ್ಮಹತ್ಯೆ

ಬೆಂಗಳೂರು: ನೇಣು ಬಿಗಿದುಕೊಂಡು ಪೊಲೀಸ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮೃತ ದಂಪತಿಯನ್ನು ಹೆಚ್.ಸಿ ಸುರೇಶ್ ಹಾಗೂ ಶೀಲಾ ಎಂದು ಗುರುತಿಸಲಾಗಿದೆ. ಸುರೇಶ್ ಅವರು ಸಂಪಿಗೆ ಹಳ್ಳಿ ಎಸಿಪಿ ಕಚೇರಿಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರೆ, ಶೀಲಾ ಕಂಟ್ರೋಲ್ ರೂಂ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ನಿನ್ನೆ ಮೀಟಿಂಗ್ ಹಿನ್ನೆಲೆ ರಾತ್ರಿವರೆಗೂ ಸುರೇಶ್ ಎಸಿಪಿ ಕಚೇರಿಯಲ್ಲಿಯೇ ಇದ್ದರು. ಸಂಪಿಗೆಹಳ್ಳಿ ಉಪವಿಭಾಗದ ಇತರೇ ಸಿಬ್ಬಂದಿಯೊಂದಿಗೆ ಮೀಟಿಂಗ್ ಮುಗಿದ ಬಳಿಕ ಲವಲವಿಕೆಯಿಂದಲೇ ಮಾತನಾಡಿ ಮನೆಗೆ ಹೋಗಿದ್ದಾರೆ. ಆದರೆ ಬೆಳಗ್ಗೆ ಏಕಾಏಕಿ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.
ದಂಪತಿ ಕಳೆದ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಮನನೊಂದು ಸುರೇಶ್ ಹಾಗೂ ಶೀಲಾ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಪೊಲೀಸ್ ದಂಪತಿಯ ಆತ್ಮಹತ್ಯೆ ಕುರಿತಂತೆ ಕೊತ್ತನೂರು ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
