Wednesday, 22nd May 2019

Recent News

50 ಲಕ್ಷ ರೂ. ಎಗರಿಸಿದ್ದ ದರೋಡೆಕೋರನ ಕಾಲು ಸೀಳಿದ ಪೊಲೀಸ್ ಗುಂಡು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸ್ ಗುಂಡು ಸದ್ದು ಮಾಡಿದ್ದು, ರೌಡಿಶೀಟರ್ ಹಾಗೂ ದರೋಡೆಕೋರನ ಕಾಲು ಸೀಳಿದ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಜೇಶ್ ಮುಕುಂದೇಗೌಡ ಪೊಲೀಸ್ ಗುಂಡಿಗೆ ಸಿಕ್ಕಿಬಿದ್ದಿ ರೌಡಿಶೀಟರ್. ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ಬೆಳಗ್ಗೆ ಏಳು ಗಂಟೆಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಇದೇ ವೇಳೆ ರಾಜೇಶ್ ಜೊತೆಗಿದ್ದ ಇಬ್ಬರು ಆರೋಪಿಗಳಾದ ನಂದಕುಮಾರ್ ಮತ್ತು ಬಸವರಾಜ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ?:
ರಾಜೇಶ್ 50 ಲಕ್ಷ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಹೀಗಾಗಿ ಆತನ ಬಂಧನಕ್ಕಾಗಿ ಪೊಲೀಸರು ಪ್ಲಾನ್ ಮಾಡಿದ್ದರು. ಸೂಕ್ತ ಮಾಹಿತಿ ಪಡೆದಿದ್ದ ಎಪಿ ನಗರ ಸಬ್ ಇನ್ಸ್ ಪೆಕ್ಟರ್ ಬಿ.ಸಿ.ರಾಜಶೇಕರಯ್ಯ ಅವರ ನೇತೃತ್ವದ ತಂಡ ಇಂದು ವಿಶ್ವೇಶ್ವರಯ್ಯ ಲೇಔಟ್ 18ನೇ ಕ್ರಾಸ್‍ನಲ್ಲಿ ರಾಜೇಶ್‍ಗಾಗಿ ಬಲೆ ಬೀಸಿದ್ದಾರೆ. ಈ ವೇಳೆ ಪೇದೆ ಮಹೇಶ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ.

ಪೇದೆಯ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಸಬ್ ಇನ್ಸ್ ಪೆಕ್ಟರ್ ಬಿ.ಸಿ.ರಾಜಶೇಕರಯ್ಯ ಫೈರಿಂಗ್ ಮಾಡಿದ್ದಾರೆ. ಗುಂಡು ರಾಜೇಶ್ ಕಾಲು ಸೀಳಿದೆ. ತಕ್ಷಣವೇ ರಾಜೇಶ್ ಹಾಗೂ ಆತನ ಜೊತೆಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜೇಶ್‍ನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಲಾಗುತ್ತಿದ್ದು, ಬಳಿಕ ವಿಚಾರಣೆ ಆರಂಭವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *