Wednesday, 26th February 2020

ಬಾಡಿಗೆ ಮನೆ ಕೊಡಿಸೋ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ಕಾಮುಕ ಅಂದರ್

ಬೆಂಗಳೂರು: ಬಾಡಿಗೆ ಮನೆ ಕೊಡಿಸುವುದಾಗಿ ಹೇಳಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಮಪುರದ ನಿವಾಸಿ ಕುಮಾರ್ ಬಂಧಿತ ಆರೋಪಿ. ಕುಮಾರ್ ಬಾಡಿಗೆ ಮನೆ ಕೊಡಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದ. ಬಾಡಿಗೆ ಮನೆ ಕೊಡಿಸುವುದಾಗಿ ಹೇಳಿ ಕುಮಾರ್ ಯುವತಿಯ ನಂಬರ್ ಪಡೆದಿದ್ದ. ಅನೇಕ ಬಾರಿ ಯುವತಿಗೆ ಕಿರುಕುಳ ಕೊಡುತ್ತಿದ್ದ.

ಕುಮಾರ್‌ನ ಅಸಭ್ಯ ವರ್ತನೆಯಿಂದ ಯುವತಿ ದೂರ ಉಳಿದಿದ್ದಳು. ಇದರಿಂದಾಗಿ ಆರೋಪಿ ಕುಮಾರ್ ಮೇ 30ರಂದು ಶ್ರೀರಾಮಪುರದ ಎಲ್.ಎನ್.ಪುರ ರಸ್ತೆಯಲ್ಲಿ ಯುವತಿಯ ಕೈ ಹಿಡಿದು ಎಳೆದಾಡಿದ್ದ. ಆತನ ವರ್ತನೆಯಿಂದ ಬೇಸತ್ತ ಯುವತಿ ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕುಮಾರ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *