Connect with us

Bengaluru Rural

ಲಾಕ್‍ಡೌನ್ ನಡುವೆ ಆಪರೇಷನ್ ಕಮಲ – ಜೆಡಿಎಸ್‍ಗೆ ಶಾಕ್ ನೀಡಿದ ಮಾಜಿ ಬಿಜೆಪಿ ಶಾಸಕ

Published

on

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‍ನ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ ಬಿಜೆಪಿಯ ಮಾಜಿ ಶಾಸಕ ಜೆಡಿಎಸ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ಬೆಂಗಳೂರು ನಗರದ ಹೊರವಲಯ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹಾಲಿ ಶಾಸಕ ಆರ್. ಮಂಜುನಾಥ್‍ಗೆ ಮಾಜಿ ಶಾಸಕ ಎಸ್. ಮುನಿರಾಜು ಶಾಕ್ ನೀಡಿದ್ದಾರೆ. ಟಿ.ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ರಾಜಗೋಪಾಲ ನಗರದ ಜೆಡಿಎಸ್ ಪಕ್ಷದ ಮಾಜಿ ಉಪಮೇಯರ್ ಪದ್ಮಾವತಿ ಪತಿ ನರಸಿಂಹಮೂರ್ತಿ ಸೇರಿದಂತೆ ರಾಜ್ಯ ಜೆಡಿಎಸ್ ಯುವ ಘಟಕದ ಹಿರಿಯ ಉಪಾಧ್ಯಕ್ಷ ಗೋಪಾಲಕೃಷ್ಣ ಹಾಗೂ ನೂರಾರು ಸಂಗಡಿಗರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ದಾಸರಹಳ್ಳಿಯ ಮಾಜಿ ಶಾಸಕ ಎಸ್. ಮುನಿರಾಜು ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಇಂದು ಅಧಿಕೃತವಾಗಿ ಸೇರ್ಪಡೆಯಾದರು. ಈ ವೇಳೆ ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಎನ್ ಲೋಕೇಶ್, ಮುಖಂಡರಾದ ಸಿ.ಎಂ ನಾಗರಾಜು ಮತ್ತಿತರರು ಹಾಜರಿದ್ದರು.