Connect with us

Bengaluru Rural

ದರೋಡೆಗೆ ಯತ್ನ, ಮೂವರು ಆರೋಪಿಗಳ ಬಂಧನ – ಮಾರಾಕಾಸ್ತ್ರಗಳು ವಶ

Published

on

ಬೆಂಗಳೂರು: ಮಾರಣಾಂತಿಕ ವೈರಸ್ ಕೊರೊನಾ ನಡುವೆ ದರೋಡೆಗೆ ಯತ್ನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಮಾರಾಕಾಸ್ತ್ರಗಳ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಮಾಚೋಹಳ್ಳಿ ಬಳಿ ದರೋಡೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ. ರೌಡಿಶೀಟರ್ ದಿಲೀಪ್ ಕುಮಾರ್ ಮತ್ತು ಅವನ ಸಹಚರರನ್ನು ಬಂಧಿಸಿದ ಪೊಲೀಸರು, ಬಂಧಿತರಿಂದ ಲಾಂಗ್, ಚಾಕು, ದೊಣ್ಣೆ, ಹಗ್ಗ ಹಾಗೂ ಖಾರದ ಪುಡಿ ಮತ್ತು ಒಂದು ಆಟೋವನ್ನು ವಶಕ್ಕೆ ಪಡೆದಿದ್ದಾರೆ.

ದಿಲೀಪ್ ಕುಮಾರ್, ಬಾಲಾಜಿ.ಪಿ, ಮಂಜುನಾಥ್ ಕೆ ಬಂಧಿತರಾಗಿದ್ದು, ಇತ್ತ ತಲೆ ಮರೆಸಿಕೊಂಡಿರುವ ಜಗದೀಶ್, ಮೈಲಾರಿ, ಅಭಿಗಾಗಿ ತೀವ್ರ ಶೋಧ ನಡೆದಿದೆ. ಕೊರೊನಾ ಮಧ್ಯೆಯೂ ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಒಳಾಗಾಗಿದ್ದಾರೆ. ನೆಲಮಂಗಲ ಉಪವಿಭಾಗದ ಸಿಪಿಐ ಸತ್ಯನಾರಾಯಣ ಹಾಗೂ ಪಿಎಸ್‍ಐ ಮುರುಳಿ ಸೇರಿದಂತೆ ಮಾದನಾಯಕನಹಳ್ಳಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಈ ಆರೋಪಿಗಳು ಕೊರೊನಾ ವೈರಸ್‍ನ ನೆಪವಾಗಿಸಿ ರಸ್ತೆಯಲ್ಲಿ ಬರುವ ಜನರ ಬಳಿ ದರೋಡೆ ಮಾಡಲು ಸಜ್ಜಾಗಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಮಾದನಾಯಕನಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸುವ ಮೂಲಕ ಮುಂದಾಗುವಂತಹ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.