Connect with us

Bengaluru City

ಕಾಸು ಕೊಟ್ರೆ ಸಿಗುತ್ತೆ ಕೋವಿಡ್ ನೆಗೆಟಿವ್ ರಿಪೋರ್ಟ್- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

Published

on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಕೊರೊನಾದ ಕರಾಳ ದಂಧೆಯನ್ನ ಪಬ್ಲಿಕ್ ಟಿವಿ ಸ್ಟಿಂಗ್ ತಂಡ ಬಯಲಿಗೆಳೆದಿದೆ.

ಕೊರೊನಾ ಹೆಸರಲ್ಲಿ ಬಿಂದಾಸ್ ಬ್ಯುಸಿನೆಸ್ ನಡೆಯುತ್ತಿದ್ದು, ವಾರಿಯರ್ಸ್ ದಿನಕ್ಕೆ ಸಾವಿರ ಸಾವಿರ ಹಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೋವಿಡ್ ಟೆಸ್ಟಿಂಗ್ ಟಾರ್ಚರ್ ಗೆ ಕೊರೊನಾ ವಾರಿಯರ್ಸ್ ಕಳ್ಳದಾರಿ ಹಿಡಿರುವ ಅಸಲಿ ಮುಖ ಬಯಲಾಗಿದೆ.

ಕೈಗೆ ಕಾಸು ಕೊಟ್ಟರೆ ಸಾಕು, ಕೋವಿಡ್ ನೆಗಟಿವ್ ರಿಪೋರ್ಟ್ ನಿಮಗೆ ಸಿಗುತ್ತೆ. ಸ್ವಾಬ್ ಕಲೆಕ್ಟ್ ಮಾಡಿಕೊಳ್ಳದೇ, ಟ್ಯೂಬ್ ನಲ್ಲಿ ನೀರು ಹಾಕಿ ಸ್ಯಾಂಪಲ್ಸ್ ನ್ನು ಲ್ಯಾಬ್ ಗೆ ಕಳುಹಿಸುತ್ತಾರೆ. ಜಸ್ಟ್ ಮೊಬೈಲ್ ನಂಬರ್, ಓಟಿಪಿ ನಂಬರ್ ಕೊಟ್ರೆ ಸಾಕು ನೀವಿದ್ದಲ್ಲಿಗೆ ಕೋವಿಡ್ ರಿಪೋರ್ಟ್ ಬರುತ್ತೆ. ಬೆಂಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಆಗೋಕೆ ಈ ಡರ್ಟಿ ಬ್ಯುಸಿನೆಸ್ಸೇ ಪ್ರಮುಖ ಕಾರಣವಾಗಿದೆ.

ವಾರ್ಡ್ 143, ವಿ ವಿ ಪುರಂನ, ಪೂಬತಿ ಹೆರಿಗೆ ಆಸ್ಪತ್ರೆಯಲ್ಲಿ ಡರ್ಟಿ ಬ್ಯುಸಿನೆಸ್ ನಡೆಯುತ್ತಿದೆ. ಒಂದೇ ನಂಬರ್ ಮೇಲೆ ನಾಲ್ಕೈದು ಐಡಿ ಕ್ರಿಯೆಟ್ ಮಾಡಿ ರಿಪೋರ್ಟ್ ಕೊಡುತ್ತಾರೆ. ಪೂಬತಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಗೊತ್ತಾಗದೇ ಈ ಕೊರೊನಾ ಧಂದೆ ನಡೆಯುತ್ತಿದೆ. ಗಂಟಲು ದ್ರವವನ್ನ ತೆಗದುಕೊಳ್ಳದೇ ಈ ಖತರ್ನಾಕ್ ಟೀಂ ರಿಸಲ್ಟ್ ಕೊಡುತ್ತೆ. ಒಬ್ಬೊಬ್ಬರಿಂದ 1,000-1,500 ರೂಪಾಯಿ ಹಣ ವಸೂಲಿ ಮಾಡುತ್ತದೆ. ಈ ಹಿಂದೆ ಬನಶಂಕರಿಯಲ್ಲಿ ಬಿಬಿಎಂಪಿ ಗಂಟಲು ದ್ರವ ಪರೀಕ್ಷೆ ಮಾಡಿಕೊಳ್ಳದೇ ರಿಸಲ್ಟ್ ಕೊಟ್ಟಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ನಿರಂತರ ವರದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬಳಿಕವೂ ತನ್ನ ತಪ್ಪನ್ನ ಮುಚ್ಚಿಟ್ಟುಕೊಳ್ಳಲು ಬಿಬಿಎಂಪಿ ಯತ್ನಿಸಿತ್ತು.

ಬೆಂಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಸಂಖ್ಯೆ ಹೆಚ್ಚಳವಾಗಿದೆ. ಕೈಗೆ ಹಣ ಕೊಟ್ರೆ ಎಷ್ಟು ಜನರಿಗಾದ್ರೂ ನೆಗಟಿವ್ ರಿಪೋರ್ಟ್ ಕೊಡುವ ಜಾಲದ ಬಗ್ಗೆ ಪಬ್ಲಿಕ್ ಟಿವಿ ಸ್ಟಿಂಗ್ ತಂಡಕ್ಕೆ ಒಬ್ಬರು ಕರೆ ಮಾಡಿ ಅಕ್ರಮದ ಬಗ್ಗೆ ಮಾಹಿತಿ ಕೊಡ್ತಾರೆ. ಕೂಡಲೇ ಅಲರ್ಟ್ ಆದ ತಂಡ ಸ್ಪಾಟ್ ಗೆ ಲಗ್ಗೆ ಇಟ್ಟಿತು. ನಮ್ಗೆನು ಗೊತ್ತಿಲ್ಲದವ್ರಂತೆ ರಿಪೋರ್ಟ್ ಕೇಳಿದ್ವಿ ಅಷ್ಟೆ. ಸ್ವಲ್ಪ ವೇಟ್ ಮಾಡಿ, ಎಷ್ಟು ಜನ್ರಿದ್ದಾರೆ ಅಂತ ಮಾತಿಗಿಳಿದ್ರು. ನಮ್ಮ ಸ್ಟಿಂಗ್ ತಂಡದ ಜೊತೆ ಇಬ್ಬರು ಮಹಿಳೆಯರು ಮಾತಿಗಿಳಿದಾಗ ಕೊರೊನಾ ರಿಪೋರ್ಟ್ ನ ಕರಾಳ ಸತ್ಯ ಅನಾವರಣವಾಯ್ತು. ಅಲ್ಲಿ ಕೊರೊನಾ ದಂಧೆ ಹೇಗೆ ನಡೆಯುತ್ತೆ ಅನ್ನೋದನ್ನ ಇಲ್ಲಿ ತಿಳಿಸಲಾಗಿದೆ.

ಆಶಾ ಕಾರ್ಯಕರ್ತೆ: ಎರಡೂವರೆ ಸಾವಿರ..
ಪಬ್ಲಿಕ್ ಟಿವಿ: ಇನ್ನೂ ಐದಾರು ಜನ ಇದ್ದಾರೆ..
ಆಶಾ ಕಾರ್ಯಕರ್ತೆ : ಅವ್ರಿಗೆಲ್ಲಾ ಜಾಸ್ತಿ ಹೇಳಬೇಕು. 1 ಸಾವಿರ ಹೇಳಬೇಕು
ಪಬ್ಲಿಕ್ ಟಿವಿ: ನಾಲ್ವರಿಗಂದ್ರೂ ಎರಡೂವರೆ ಸಾವಿರ ಹೆಚ್ಚಾಯ್ತು
ಆಶಾ ಕಾರ್ಯಕರ್ತೆ : ಜಾಸ್ತಿಯಾಯ್ತಾ. 1ವರೆ ಸಾವಿರ ಒಬ್ರಿಗೆ ತೊಗೊಳೋದು ಗೊತ್ತಾ ನಿಮ್ಗೆ. ನಾನು ನಿಮ್ಗೊಸ್ಕರ ಕಡಿಮೆ ಮಾಡಿದೇನೆ.
ಪಬ್ಲಿಕ್ ಟಿವಿ: ನೆಕ್ಸ್ಟ್ ಇನ್ನೂ ಹುಡುಗ್ರುನಾ ಕರ್ಕೊಂಡು ಬರ್ತೇನೆ ಮೇಡಂ.
ಆಶಾ ಕಾರ್ಯಕರ್ತೆ: ಆದ್ರೆ ಅಲ್ಲಿ ಬಂದು ಬರೆಸಿ ಬಿಡಬೇಕು ನೀನು. ನನಗೆ ಯಾರಾದಾದ್ರೂ ಒಂದು ನಂಬರ್ ಕೊಡಿ. ಬರೆಸಿದ ಮೇಲೆ ನಿಂತ್ಕೊಳ್ದೆ ಇಲ್ಲಿಗೆ ಕಳಿಸಬೇಕು.. ಬೇಜಾರಿಲ್ಲ ತಾನೆ
ಪಬ್ಲಿಕ್ ಟಿವಿ: ನಮಗೆ ಯಾಕೆ ಬೇಜಾರು
ಆಶಾ ಕಾರ್ಯಕರ್ತೆ: ಈಗ ನಾನು ಎಂಟ್ರಿ ಮಾಡ್ತೇನೆ. ನಿಮ್ ಮೊಬೈಲ್ ಗೆ ಮೆಸೇಜ್ ಬರುತ್ತೆ. ನೀವು ಹೊರಡಿ.. ಹೊರಡಿ..ಇಲ್ಲಿ ಇರ್ಬೇಡಿ..

ಹೀಗೆ ಗೊತ್ತಾಗದಂತೆ ಅದೇಗೆ ಹಣವನ್ನ ಲಪಟಾಯಿಸುತ್ತಿದ್ದಾರೆ. ಹಣ ಕೊಡೊದಿಕ್ಕಿಂತ ಮುಂಚೆ ತಂಡ ಈ ಆಶಾ ವರ್ಕರ್ ಹಾಗೂ ನರ್ಸ್ ಜೊತೆ ಮಾತಿಗಿಳಿದಾಗ ತಮ್ಮ ಇಲ್ಲಿಗಲ್ ಬ್ಯುಸಿನೆಸ್ ಬಗ್ಗೆ ಬಾಯ್ಬಿಟ್ರು. ಫೋನ್ ನಂಬರ್ ಒಂದು ಕೊಡಿ ಅಷ್ಟೆ ಸಾಕು. ನಾವು ಹ್ಯಾಂಡಲ್ ಮಾಡ್ತೇವೆ ಅಂತ ಫೋನ್ ನಂಬರ್ ತೆಗೆದುಕೊಂಡ್ರು. ನಮ್ಮ ಅಸಲಿ ಹೆಸ್ರುಗಳನ್ನ ಬದಲಿಸಿ ಬೇರೆಯದ್ದೇ ಹೆಸರನ್ನು ಬರೆಸಿದ್ವಿ. ಒಂದೇ ಫೋನ್ ನಂಬರ್ನ ಮೇಲೆ ನಾಲ್ಕು ಜನ್ರಿಗೆ Sಖಈ ಐಡಿ ಜನರೇಟ್ ಮಾಡಿದ್ರು. ನಮ್ಮ ಸ್ಟಿಂಗ್ ತಂಡದ ಜೊತೆ ಏನೆಲ್ಲಾ ಮಾತನಾಡಿದ್ರು ಎಂಬುದನ್ನು ಈ ಕೆಳಗಿನ ವೀಡಿಯೋ ನೋಡಿ.

Click to comment

Leave a Reply

Your email address will not be published. Required fields are marked *

www.publictv.in