Tuesday, 25th February 2020

3 ವರ್ಷ ಪ್ರೀತಿಸಿದವಳಿಗೆ ಚಾಕು ಇರಿದ ಪ್ರೇಮಿ

ಬೆಂಗಳೂರು: ಯುವಕನೋರ್ವ ತಾನು ಮೂರು ವರ್ಷ ಪ್ರೀತಿಸಿದ ಪ್ರೇಯಸಿಗೆ ಚಾಕುವಿನಿಂದ ಇರಿದ ಘಟನೆ ಸಿಲಿಕಾನ್ ಸಿಟಿಯ ಚೊಕ್ಕಸಂದ್ರದಲ್ಲಿ ನಡೆದಿದೆ.

ಚಾಕು ಇರಿದ ಪಾಗಲ್ ಪ್ರೇಮಿಯನ್ನು 26 ವರ್ಷದ ಜನಾರ್ಧನ್ ಎಂದು ಗುರುತಿಸಲಾಗಿದೆ. ಈತ ಕಾವ್ಯ ಎಂಬ ಹುಡುಗಿಯನ್ನು 3 ವರ್ಷದಿಂದ ಪ್ರೀತಿ ಮಾಡುತ್ತಿದ್ದ. ಆದರೆ ಆರು ತಿಂಗಳಿಂದ ಮಾತು ಬಿಟ್ಟದ್ದ ಆಕೆಗೆ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಚಾಕು ಹಾಕಿ ಪಾರಾರಿಯಾಗಿದ್ದಾನೆ.

ಚಾಕು ಇರಿತದಿಂದ ಗಾಯಗೊಂಡಿದ್ದ ಕಾವ್ಯಾಳನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆರೋಪಿಯ ಬಂಧನಕ್ಕ ಬಲೆ ಬೀಸಿದ್ದ ಪೊಲೀಸರು ಇಂದು ದಾಬಸಪೇಟೆಯ ಸಂಬಂಧಿಕರ ಮನೆಯಲ್ಲಿದ್ದ ಜನಾರ್ಧನ್‍ನನ್ನು ಹುಡುಕಿ ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *