Connect with us

Bengaluru City

ಟ್ವೀಟ್ ಮಾಡಿ ಟರ್ಮಿನೇಟರ್ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ ಸುದೀಪ್

Published

on

ಬೆಂಗಳೂರು: ಹಾಲಿವುಡ್‍ನ ಕನ್ನಡ ಡಬ್ಬಿಂಗ್ ಸಿನಿಮಾ ಟರ್ಮಿನೇಟರ್‍ಗೆ ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದು, ಟ್ವೀಟ್ ಮಾಡುವ ಮೂಲಕ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.

ಸುದೀಪ್ ಟ್ವಿಟ್ಟರ್ ಮೂಲಕ ಟರ್ಮಿನೇಟರ್ ಚಿತ್ರ ಕನ್ನಡ ಟ್ರೈಲರನ್ನು ಲಾಂಚ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಹಾಲಿವುಡ್‍ನ ಟರ್ಮಿನೇಟರ್ ಡಾರ್ಕ್ ಫೇಟ್ ಚಿತ್ರದ ಕನ್ನಡ ಅವತರಣಿಕೆ ಟ್ರೈಲರ್ ಬಿಡುಗಡೆ ಮಾಡಿರುವ ಸುದೀಪ್, ಟ್ರೈಲರನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಇದೇ ನವೆಂಬರ್ 1ರಂದು ಚಿತ್ರ ಬಿಡುಗಡೆ ಆಗಲಿದ್ದು. ಅರ್ನಾಲ್ಡ್ ದೊಡ್ಡ ಆಕ್ಷನ್ ಹಿರೋಗಳಲ್ಲಿ ಒಬ್ಬರು. ನಾನು ಅವರ ಅಭಿಮಾನಿ ಕೂಡ ಎಂದಿರುವ ಕಿಚ್ಚ, ಫಾಕ್ಸ್ ಸ್ಟೂಡಿಯೋಸ್‍ಗಾಗಿ ಕನ್ನಡ ಟ್ರೈಲರ್ ಬಿಡುಗಡೆ ಮಾಡಿದ್ದೇನೆ, ಟ್ರೈಲರ್ ನೋಡಿ ನನಗೆ ಸಂತೋಷವಾಗಿದೆ ಎಂದಿದ್ದಾರೆ ಸುದೀಪ್.

ವಿಡಿಯೋ ಪೋಸ್ಟ್ ನಲ್ಲಿ ಸುದೀಪ್, ಟರ್ಮಿನೇಟರ್ ಅಂದಾಕ್ಷಣ ನಮಗೆ ನಮ್ಮ ಬಾಲ್ಯ ನೆನಪಾಗುತ್ತದೆ. ಅಂದಿನಿಂದಲೂ ಸಿನಿಮಾ ಫ್ಯಾನ್ಸ್ ನಾವು. ಜೊತೆಗೆ ಅರ್ನಾಲ್ಡ್ ಅಭಿಮಾನಿ ಕೂಡ. ಈಗ ಇದೇ ಫ್ರ್ಯಾಂಚೆಸ್ ನಿಂದ ಇನ್ನೊಂದು ಪಾರ್ಟ್ ಬರುತ್ತಿದೆ. ಫಾಕ್ಸ್ ಸ್ಟುಡಿಯೋಸ್‍ಗಾಗಿ ಕನ್ನಡ ಟ್ರೈಲರನ್ನು ನಾನು ಲಾಂಚ್ ಮಾಡುತ್ತಿದ್ದೇನೆ ಎಂದು ಹೇಳಿ ಸಿನಿಮಾಗೆ ಶುಭ ಕೋರಿದ್ದಾರೆ.