Connect with us

Bengaluru City

ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ

Published

on

Share this

ಬೆಂಗಳೂರು: ಬಿಜೆಪಿಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಇದೀಗ ಸ್ಫೋಟಕ ತಿರುವುದು ಪಡೆದುಕೊಂಡಿದ್ದು, ಹತ್ಯೆಯ ರಹಸ್ಯ ಬಯಲಾಗುತ್ತಿದೆ.

ಪ್ರಕರಣ ಸಂಬಂಧ ಪೊಲೀಸರು ರೇಖಾ ಕದಿರೇಶ್ ಅತ್ತಿಗೆ ಮಾಲಾ, ಮಾಲಾ ಪುತ್ರ ಅರುಳ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪೀಟರ್, ರೇಖಾ ಕದಿರೇಶ್ ಹತ್ಯೆಗೆ 4 ತಿಂಗಳ ಟಾರ್ಗೆಟ್ ನೀಡಲಾಗಿತ್ತು. ಕೊಲೆಗೆ 4 ತಿಂಗಳಿಂದಲೇ ಹತ್ಯೆ ಮಾಡಲು ಪಾತಕಿಗಳು ತಯಾರಿ ಮಾಡಲಾಗಿತ್ತು. ಕೊಲೆ ಬಳಿಕ ತಪ್ಪಿಸಿಕೊಳ್ಳಲು ಗ್ಯಾಂಗ್ 20 ಲಕ್ಷ ರೂಪಾಯಿ ಕೇಳಿತ್ತು ಎಂದು ಪೊಲೀಸರ ಮುಂದೆ ಪಾತಕಿ ಪೀಟರ್ ಹೇಳಿದ್ದಾನೆ.

ಮತ್ತೆ ಮೂವರ ಬಂಧನ:
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸ್ಟೀಫನ್, ಅಜಯ್, ಪುರುಷೋತ್ತಮ್ ಎಂದು ಗುರುತಿಸಲಾಗಿದೆ. ಇವರು ಕೊಲೆ ನಡೆದಾಗ ಸ್ಥಳದಲ್ಲೇ ಇದ್ದ ಜನ ಅಡ್ಡಬರದಂತೆ ತಡೆದಿದ್ದರು. ಪೀಟರ್ ಹಾಗೂ ಸೂರ್ಯ ಚಾಕುವಿನಿಂದ ಇರಿಯುವ ವೇಳೆ ಈ ಮೂವರು ಅಲ್ಲೇ ಇದ್ದರು. ಅಲ್ಲದೆ ಪುರುಷೋತ್ತಮ್ ಸಿಸಿಟಿವಿಗಳನ್ನು ತಿರುಗಿಸಿ ಕೃತ್ಯಕ್ಕೆ ಸಹಕರಿಸಿದ್ದ.

ಕೊಲೆಯ ಬಳಿಕ ಆಟೋ ಚಾಲಕ ಡಿಸೋಜಾ, ಹುಸ್ಕೂರಿಗೆ ಬಿಟ್ಟು ಬಂದಿದ್ದ. ಹೀಗಾಗಿ ಸದ್ಯ ಪೀಟರ್, ಸೂರ್ಯ ಎಸ್ಕೇಪ್‍ಗೆ ಸಹಕರಿಸಿದ್ದ ಆಟೋ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: 67ನೇ ವಯಸ್ಸಿನಲ್ಲಿ ಪಿಹೆಚ್‍ಡಿ ಪಡೆದ ವೃದ್ಧೆ

ಚಪ್ಪಲಿ ಏಟು ತಿಂದಿದ್ದ ಪೀಟರ್:
ಈ ಹಿಂದೆ ಆರೋಪಿ ಪೀಟರ್, ರೇಖಾ ಕದಿರೇಶ್ ಕೈಯಲ್ಲಿ ಚಪ್ಪಲಿ ಏಟು ತಿಂದಿದ್ದ. ರೇಖಾ ವೈಯಕ್ತಿಕ ಜೀವನದ ಬಗ್ಗೆ ಪೀಟರ್ ವದಂತಿ ಹಬ್ಬಿಸಿದ್ದ. ಇದೇ ಸಿಟ್ಟಲ್ಲಿ ಪೀಟರ್‍ಗೆ ಚಪ್ಪಲಿಯಿಂದ ರೇಖಾ ಬಾರಿಸಿದ್ದರು. ಆ ಬಳಿಕದಿಂದ ರೇಖಾಗೆ ಗೊತ್ತಾಗದಂತೆ ಏರಿಯಾದಲ್ಲಿ ವ್ಯವಹಾರಗಳಲ್ಲಿ ತಲೆಹಾಕ್ತಿದ್ದ. ಹೀಗಾಗಿ ಪೀಟರ್‍ನನ್ನು ರೇಖಾ ಕದಿರೇಶ್ ದೂರ ಇಟ್ಟಿದ್ದರು. ಗಾಂಜಾ ಕೇಸ್, ಗಲಾಟೆ ಕೇಸ್‍ನಲ್ಲಿ ರೇಖಾ, ಪೀಟರ್‍ಗೆ ಸಹಾಯ ಮಾಡುತ್ತಿರಲಿಲ್ಲ. ಇದೇ ಸಿಟ್ಟಲ್ಲಿ ಒಂದೂವರೆ ವರ್ಷದ ಹಿಂದೆ ಇಬ್ಬರ ಮಧ್ಯೆ ದ್ವೇಷ ಶುರುವಾಗಿತ್ತು.

ಕಣ್ಣೀರಾಕಿದ್ದ ನಾದಿನಿ ವಶಕ್ಕೆ:
ರೇಖಾ ಕದಿರೇಶ್ ಹತ್ಯೆಯ ದಿನ ಕಣ್ಣೀರು ಹಾಕಿದ್ದ ನಾದಿನಿಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಕದಿರೇಶ್ ನಾದಿನಿ ಮಾಲಾ, ಪುತ್ರ ಅರುಳ್ ನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರ ಮೇಲೆ ರೇಖಾ ಕದಿರೇಶ್ ಹತ್ಯೆಗೆ ಪಿತೂರಿ ನಡೆದಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸ್ವಂತ ಮಗುವನ್ನೇ ಕೊಂದು ಹೂತುಹಾಕಿದ ಪೋಷಕರು – ಮೃತದೇಹ ಹೊರತೆಗೆದು ಪರಿಶೀಲನೆ

ರಾಜಕೀಯಕ್ಕಾಗಿ ಮಾಲಾ ಕುಟುಂಬ ನಾದಿನಿಗೆ ಸ್ಕೆಚ್ ಹಾಕಿತ್ತು. ಕಾರ್ಪೋರೇಟರ್ ಚುನಾವಣೆಯಲ್ಲಿ ನಿಲ್ಲಲು ಲೆಕ್ಕಾಚಾರ ಹಾಕಿದ್ದರು. ಆದರೆ ಸಹೋದರನ ಪತ್ನಿ ರೇಖಾ ಕದಿರೇಶ್ ಅಡ್ಡಿ ಎಂಬ ಲೆಕ್ಕಾಚಾರ ಇತ್ತು. ಹೀಗಾಗಿ ರೇಖಾ ಕದಿರೇಶ್ ಮುಗಿಸಿಬಿಟ್ಟರೆ ಸುಲಭ ಆಗುತ್ತೆ ಎಂಬ ದುರಾಸೆ ಅವರಲ್ಲಿತ್ತು. ಹೀಗಾಗಿ ಪೀಟರ್ ಮೂಲಕ ರೇಖಾ ಕದಿರೇಶ್ ಹತ್ಯೆಗೆ ಪಿತೂರಿ ನಡೆದಿತ್ತು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹತ್ಯೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ:
ರೇಖಾ ಕದಿರೇಶ್ ಹತ್ಯೆಯ ದೃಶ್ಯಾವಳಿ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕಾರ್ಪೋರೇಟರ್ ಕಚೇರಿ ಪಕ್ಕದಲ್ಲೇ ನೆಲಕ್ಕುರುಳಿಸಿ ಕೊಲೆ ಮಾಡಲಾಗಿದೆ. ಆರೋಪಿಗಳಾದ ಪೀಟರ್ ಹಾಗೂ ಸೂರ್ಯ ರೇಖಾಗೆ ಚಾಕು, ಡ್ರ್ಯಾಗರ್‍ನಿಂದ ಇರಿದಿದ್ದರು. ಇತ್ತ ಕೊಲೆಗೆ ಅಡ್ಡಿ ಆಗದಂತೆ ಸ್ಟೀಫನ್ ಹಾಗೂ ಅಜಯ್ ರಕ್ಷಣೆಗೆ ನಿಂತಿದ್ದು, ಸದ್ಥಳಕ್ಕೆ ಬಂದವರ ಮೇಲೆ ಕುರ್ಚಿಯನ್ನು ಎಸೆದಿದ್ದರು. ಕೊಲೆಗೂ ಮೊದಲು ಆರೋಪಿ ಪುರುಷೋತ್ತಮ ಸಿಸಿಟಿವಿ ತಿರುಗಿಸಿದ್ದ.

Click to comment

Leave a Reply

Your email address will not be published. Required fields are marked *

Advertisement