Bengaluru City
ಕ್ಲರ್ಕ್ ರೀತಿ ಕೆಲಸ ಮಾಡಿದೆ, ಮುಖ್ಯಮಂತ್ರಿಯಾಗಿ ಕಣ್ಣಲ್ಲಿ ನೀರು ಹಾಕಿದೆ: ಹೆಚ್ಡಿಕೆ

– ಸಿದ್ದರಾಮಯ್ಯಗೆ ಸವಾಲೆಸೆದ ಕುಮಾರಸ್ವಾಮಿ
ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಾನು ಕ್ಲರ್ಕ್ ರೀತಿ ಕೆಲಸ ಮಾಡಿದೆ. ಅಲ್ಲದೆ ಒಬ್ಬ ಮುಖ್ಯಮಂತ್ರಿಯಾಗಿ ಕಣ್ಣಲ್ಲಿ ನೀರು ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸರ್ಕಾರ ಪತನದಲ್ಲಿ ನನ್ನ ತಪ್ಪಿಲ್ಲ. ರಾಜಕೀಯ ನಿರ್ಧಾರ ಒಬ್ಬನ ನಿರ್ಧಾರ ಆಗಿರಲಿಲ್ಲ. ನನ್ನ ಸ್ವಯಂಕೃತ ಅಪರಾಧ ಅಲ್ಲ. ನನ್ನ ಕಡೆಯಿಂದ ಶೇ.200 ರಷ್ಟು ಯಾವುದೇ ತಪ್ಪು ಆಗಿಲ್ಲ ಎಂದು ತಿಳಿಸಿದರು.
ಕರ್ಕ್ ರೀತಿ ಕೆಲಸ ಮಾಡಿದೆ, ಮುಖ್ಯಮಂತ್ರಿಯಾಗಿ ಕಣ್ಣಲ್ಲಿ ನೀರು ಹಾಕಿದ್ದೇನೆ. ನಾನು ಅವಕಾಶವಾದಿ ರಾಜಕಾರಣಿ ಅಲ್ಲ, ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ. ಸರ್ಕಾರ ಪತನವಾಗಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಹೆಚ್ಡಿಕೆ ಆರೋಪಿಸಿದರು.
ಇದೇ ವೇಳೆ ಸಿದ್ದರಾಮಯ್ಯಗೆ ಸವಾಲು ಹಾಕಿದ ಹೆಚ್ಡಿಕೆ, ರಾಮನಗರಕ್ಕೆ ಜಮೀರ್ ಅಲ್ಲ ಸಿದ್ದರಾಮಯ್ಯ ಅವರೇ ಬರಲಿ. ಸಿದ್ದರಾಮಯ್ಯ ಅವರೇ ಬಂದು ನಿಂತುಕೊಳ್ಳಲಿ. ರಾಮನಗರದಲ್ಲಿ ದ್ವೇಷದ ರಾಜಕಾರಣ ನಡೆಯಲ್ಲ ಎಂದು ಹೇಳಿದರು.
2006ರ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ಸೇಡು ತೀರಿಸಿಕೊಂಡಿಲ್ಲ. ನಮ್ಮ ಪಕ್ಷವನ್ನು ಉಳಿಸಿಕೊಂಡಿದ್ದೇವೆ. ನಾನು ಸೋತಿದ್ದೇನೆ, ದೇವೇಗೌಡರು ಸೋತಿದ್ದಾರೆ. ಆದರೆ ಚಾಮುಂಡೇಶ್ವರಿ ಗೆಲುವು ನನಗೆ ಸಮಾಧಾನ ತಂದಿದೆ ಎಂದರು.
