Connect with us

Cinema

ಡ್ರಗ್ಸ್‌ ಕೇಸ್‌- ನಟಿ ಸಂಜನಾ ಅರೆಸ್ಟ್‌ ಸಾಧ್ಯತೆ

Published

on

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯ ಬಳಿಕ ಸಂಜನಾ ಅವರನ್ನು ಮೇಲೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಬಂಧಿಸುವ ಸಾಧ್ಯತೆಯಿದೆ.

ಇಂದು ಬೆಳಗ್ಗೆ 6:30ಕ್ಕೆ ಇಂದಿರಾ ನಗರದಲ್ಲಿರುವ ನಟಿ ಸಂಜನಾ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು.

ಕಳೆದ ವಾರ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಬಳಿಕ ಸಿಸಿಬಿ ಬಂಧಿಸಿತ್ತು. ಕಳೆದ ವಾರವೇ ಸಂಜನಾ ಹೆಸರು ಕೇಳಿ ಬಂದಿತ್ತು. ಆದರೆ ಸಿಸಿಬಿ ಎಫ್‌ಐಆರ್‌ನಲ್ಲಿ ಸಂಜನಾ ಹೆಸರು ಉಲ್ಲೇಖವಾಗಿರಲಿಲ್ಲ. ಆದರೆ ಈಗ ಆಪ್ತೆ ಪೃಥ್ವಿ ಶೆಟ್ಟಿ, ಆಪ್ತ ರಾಹುಲ್‌ ನೀಡಿದ ಹೇಳಿಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.  ಇದನ್ನೂ ಓದಿ: ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ – ಸಿಸಿಬಿ ಮುಂದೆ ಸಂಜನಾ ರಂಪಾಟ

ದಾಳಿಯ ವೇಳೆ ಪೊಲೀಸರು 3 ಮೊಬೈಲ್‌, ಪೆನ್‌ ಡ್ರೈವ್‌, ಲ್ಯಾಪ್‌ಟಾಪ್‌ ವಶಕ್ಕೆ ಪಡೆದಿದ್ದಾರೆ.

Click to comment

Leave a Reply

Your email address will not be published. Required fields are marked *