Connect with us

ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್​​ಡೌನ್ ಸಡಿಲಿಕೆ: ಸುಧಾಕರ್

ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್​​ಡೌನ್ ಸಡಿಲಿಕೆ: ಸುಧಾಕರ್

ಬೆಂಗಳೂರು: ಕೊರೊನಾ ಎರಡನೇ ಅಲೆ ತಡೆಗೆ ವಿಧಿಸಿದ್ದ ಲಾಕ್‍ಡೌನ್ ಮೂಡ್ ನಿಂದ ಸರ್ಕಾರ ಹೊರ ಬರುವ ನಿರ್ಧಾರ ಮಾಡಿದೆ. ಸೋಮವಾರದಿಂದ ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್ ಡೌನ್ ನಿಯಮಗಳನ್ನ ಸಡಿಲ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

ಲಾಕ್ ಡೌನ್ ಸಡಿಲಿಕೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಏಕಾಏಕಿಯಾಗಿ ಲಾಕ್ ಡೌನ್ ಸಡಿಲಿಕೆ ಮಾಡೋದಿಲ್ಲ. ಹಂತ ಹಂತವಾಗಿ ವೈಜ್ಞಾನಿಕವಾಗಿ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭ ಮಾಡೋದಾಗಿ ತಿಳಿಸಿದರು.

ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಂಜೆ ಮಹತ್ವದ ಸಭೆ ಇದೆ. ಸಭೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುವ ನಿರ್ಧಾರ ಮಾಡೋದಾಗಿ ಸ್ಪಷ್ಟಪಡಿಸಿದರು. ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಯಾವ ಮಾದರಿಯಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆ ಮಾಡಬೇಕು ಅಂತ ತಿಳಿಸಿದೆ. ಸೋಂಕಿನ ಪ್ರಮಾಣ ಶೇ.5 ಒಳಗೆ ಇರಬೇಕು ಅಥವಾ 5 ಸಾವಿರ ಕೇಸ್ ಒಳಗೆ ಇರಬೇಕು. ಈ ಸೋಂಕಿನ ಪ್ರಮಾಣದ ಆಧಾರದಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆ ಮಾಡಿ ಅಂತ ತಜ್ಞರು ಹೇಳಿದ್ದಾರೆ. ಇದೇ ಮಾದರಿಯಲ್ಲಿ ಸಿಎಂ ಯಡಿಯೂರಪ್ಪನವರು ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡ್ತಾರೆ ಅಂತ ತಿಳಿಸಿದರು. ಇದನ್ನೂ ಓದಿ: ಈಶ್ವರಪ್ಪ ಜನ್ಮದಿನಕ್ಕೆ ಸಿಎಂ ಶುಭ ಹಾರೈಕೆ – ಇಬ್ಬರ ಒಡನಾಟದ ಒಂದು ಮೆಲುಕು

ಮಹಾರಾಷ್ಟ್ರ, ದೆಹಲಿಯಲ್ಲಿ ಈಗಾಗಲೇ ಲಾಕ್ ಡೌನ್ ವಿನಾಯಿತಿ ನೀಡಲಾಗಿದೆ. ಆ ರಾಜ್ಯಗಳಲ್ಲಿ ಹೇಗೆ ವಿನಾಯಿತಿ ನೀಡಲಾಗಿದೆ ಅಂತ ಅವಲೋಕನ ಮಾಡಿ ನಮ್ಮಲ್ಲೂ ವೈಜ್ಞಾನಿಕವಾಗಿ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡು ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತೆ ಅಂತ ಸಚಿವ ಸುಧಾಕರ್ ತಿಳಿಸಿದರು.