Connect with us

ಪಾಕ್ ಪ್ರಧಾನಿಯ ಶೀಘ್ರ ಚೇತರಿಕೆಗೆ ಹಾರೈಸಿರೋ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಪಾಕ್ ಪ್ರಧಾನಿಯ ಶೀಘ್ರ ಚೇತರಿಕೆಗೆ ಹಾರೈಸಿರೋ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶೀಘ್ರ ಚೇತರಿಕೆಗೆ ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ಸಿಗರು ಕಿಡಿಕಾರಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಪಾಕಿಸ್ತಾನದ ಪಿಎಂ ಮಗಳ ಮದುವೆಗೆ ಹೋಗಿ ಬಂದರು. ಪಾಕ್ ಪಿಎಂರಿಂದ ಸೀರೆ ಉಡುಗೊರೆ ಪಡೆದರು. ಪಾಕ್ ಪಿಎಂ ಹೃದಯ ಶಸ್ತ್ರ ಚಿಕಿತ್ಸೆ ಆದಾಗ ಹಾರೈಸಿದರು. ಪಾಕ್‍ಗೆ ಉಚಿತ ಲಸಿಕೆ ನೀಡಿ ಔದಾರ್ಯತೆ ಮೆರೆದರು. ಪಾಕ್ ಪಿಎಂ ಕರೋನಾದಿಂದ ಗುಣವಾಗಲಿ ಎಂದರು. ನರೇಂದ್ರ ಮೋದಿ ಅವರೇ ಭಾರತೀಯರಿಗೂ ಸ್ವಲ್ಪ ಕಾಳಜಿ ತೋರಿ, 300 ರೈತರು ಸತ್ತಿದ್ದಾರೆ ಎಂದು ಬರೆದುಕೊಳ್ಳುವ ಮೂಲಕ ಮೋದಿಗೆ ಟ್ಯಾಗ್ ಮಾಡಿದೆ.

ಇಮ್ರಾನ್‍ಖಾನ್‍ಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದರು. ಕೊರೊನಾ ಸೋಂಕಿನಿಂದ ಇಮ್ರಾನ್ ಖಾನ್ ಶೀಘ್ರವೇ ಗುಣಮುಖರಾಗಲಿ ಎಂದು ಬರೆದುಕೊಂಡಿದ್ದರು. ಮೋದಿಯವರ ಈ ಟ್ವೀಟ್ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಆರೋಗ್ಯ ಸಚಿವರು, ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದೀಗ ಇಬ್ಬರನ್ನೂ ಮನೆಯಲ್ಲಿಯೇ ಕ್ವಾರಂಟೈನ್‍ಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Advertisement
Advertisement
Advertisement