Connect with us

Bengaluru City

ತಲೆಯನ್ನ ಗೋಡೆಗೆ ಹೊಡೆದು ಭೀಕರವಾಗಿ ರೌಡಿಶೀಟರ್ ಹತ್ಯೆ

Published

on

ಬೆಂಗಳೂರು: ತಲೆಯನ್ನ ಗೋಡೆಗೆ ಹೊಡೆದು ಭೀಕರವಾಗಿ ರೌಡಿ ಶೀಟರ್‍ನನ್ನು ಹತ್ಯೆಗೈದ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

ಚಂದ್ರಲೇಔಟ್ ಪೊಲೀಸ್ ಠಾಣೆಯ ಮಣಿ ಆಲಿಯಾಸ್ ಸುಬ್ರಮಣಿ ಕೊಲೆಯಾದ ರೌಡಿ ಶೀಟರ್. ಇಂದು ಬೆಳಗ್ಗಿನ ಜಾವ ಆತನ ಮನೆಯಲ್ಲೇ ಕೊಲೆ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಸುಬ್ರಮಣಿ ದರೋಡೆ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆತನ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಆದರೆ ಇಂದು ಬೆಳಗ್ಗೆ ಆತನ ಮನೆ ನುಗ್ಗಿದ್ದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ತಲೆಯನ್ನು ಗೋಡೆಗೆ ಹೊಡೆದು ಮುಖ ಗುರುತು ಸಿಗದಂತೆ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೌಡಿಶೀಟರ್ ಸುಬ್ರಮಣಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.