Connect with us

Bengaluru City

ಸಿಡಿ ಕೇಸ್ – ನಂಗೇನು ಗೊತ್ತೇ ಇಲ್ಲ ಅಂತಿದ್ದ ಆರೋಪಿಗಳ ಅಕೌಂಟ್‍ಗೆ ಲಕ್ಷ ಲಕ್ಷ ಹಣ!

Published

on

ಬೆಂಗಳೂರು: ಸಿಡಿ ಪ್ರಕರಣವನ್ನು ಬಗೆದಷ್ಟು ಒಂದೊಂದೇ ಡೀಲ್ ಬಯಲಾಗ್ತಿದೆ. ನಂಗೇನು ಗೊತ್ತೇ ಇಲ್ಲ ಅಂತಿದ್ದ ಆರೋಪಿಗಳ ಅಕೌಂಟ್‍ಗೆ ಲಕ್ಷ-ಲಕ್ಷ ಹಣ ಸಂದಾಯ ಆಗಿರುವ ಮಾಹಿತಿ ಲಭ್ಯವಾಗಿದೆ.

ಸಿಡಿ ಹಿಂದಿನ ಸೂತ್ರದಾರ ಹ್ಯಾಕರ್ ಶ್ರವಣ್ ಅಣ್ಣನ ಅಕೌಂಟ್ ಗೆ ದಿಢೀರ್ 40 ಲಕ್ಷ ಹಣ ಬಂದಿದ್ದರ ಬಗ್ಗೆ ಎಸ್‍ಐಟಿ ತನಿಖೆ ನಡೆಸುತ್ತಿದೆ. ಐದೈದು ಲಕ್ಷದಂತೆ ಐದಾರು ಬಾರಿ ಹ್ಯಾಕರ್ ಅಣ್ಣನ ಅಕೌಂಟ್ ಗೆ ಹಣ ಬಂದಿದ್ದು, ಈ ಹಣವನ್ನು ಇವರೇ ಡಿಪಾಸಿಟ್ ಮಾಡಿದ್ದಾರೆ ಅನ್ನೋ ಗುಮಾನಿ ಎದ್ದಿದೆ.

ತನಿಖೆ ವೇಳೆ ಮನೆ ಪಕ್ಕದ ಸೈಟ್ ಖರೀದಿಗೆ ಹಣ ಹೊಂದಿಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಯಾರು ಕೊಟ್ಟರು ಅಂತ ಕೇಳಿದರೆ ಸಾಲ ತಂದಿರೋದಾಗಿ ಹ್ಯಾಕರ್ ಅಣ್ಣ ಹೇಳ್ತಿದ್ದಾರೆ. ಹೀಗಾಗಿ ಎಸ್‍ಐಟಿ 40 ಲಕ್ಷದ ಡಿಡಿ ಹಾಗೂ ಚೆಕ್ ಸೀಜ್ ಮಾಡಿಕೊಂಡು ಬಂದಿದೆ. ಕಳೆದ ಮೂರು ದಿನಗಳಿಂದ ಹ್ಯಾಕರ್ ವಿಚಾರಣೆ ನಡೆಸ್ತಿರೊ ಎಸ್‍ಐಟಿಗೆ ಏಕಾಏಕಿ ಇಷ್ಟು ಹಣ ಬಂದಿದ್ರ ಬಗ್ಗೆ ಹ್ಯಾಕರ್ ಬ್ರದರ್ ಸರಿಯಾದ ಉತ್ತರ ನೀಡಿಲ್ಲ.

Click to comment

Leave a Reply

Your email address will not be published. Required fields are marked *