Connect with us

ಬೆಡ್ ಬ್ಲಾಕ್ ದಂಧೆ ಬಯಲಾದ ಎಫೆಕ್ಟ್ – ಇನ್ಮುಂದೆ ಬೆಡ್ ನಿಗದಿ ಆಗೋರಿಗೆ ಎಸ್‍ಎಂಎಸ್

ಬೆಡ್ ಬ್ಲಾಕ್ ದಂಧೆ ಬಯಲಾದ ಎಫೆಕ್ಟ್ – ಇನ್ಮುಂದೆ ಬೆಡ್ ನಿಗದಿ ಆಗೋರಿಗೆ ಎಸ್‍ಎಂಎಸ್

– 4 ಗಂಟೆಯೊಳಗೆ ಆಸ್ಪತ್ರೆಗೆ ದಾಖಲಾಗಲು ಅವಕಾಶ

ಬೆಂಗಳೂರು: ಬೆಡ್ ಬ್ಲಾಕ್ ದಂಧೆ ಬಯಲಾದ ಎಫೆಕ್ಟ್. ಇನ್ಮುಂದೆ ಬೆಡ್ ನಿಗದಿ ಆಗೋರಿಗೆ ಎಸ್‍ಎಂಎಸ್ ಸಂದೇಶ ಕಳಿಸಲು ಸರ್ಕಾರ ತೀರ್ಮಾನಿಸಿದೆ.

ಎಸ್‍ಎಂಎಸ್ ಬಂದ 4 ಗಂಟೆಯೊಳಗೆ ಆಸ್ಪತ್ರೆಗೆ ದಾಖಲಾಗಲು ಸೋಂಕಿತರಿಗೆ ಅವಕಾಶ ಇರಲಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ಈ ಮೊದಲು 12 ಗಂಟೆಯವರೆಗೂ ಅಡ್ಮಿಟ್ ಆಗಲು ಅವಕಾಶ ಇತ್ತು. ಅಲ್ಲದೆ ಅವ್ಯವಹಾರ ತಡೆಗಾಗಿ ಆಸ್ಪತ್ರೆಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಸಿಸ್ಟಂ ಜಾರಿಗೆ ಸರ್ಕಾರ ಮುಂದಾಗಿದೆ.

ಬೆಡ್ ಬ್ಲಾಕ್ ದಂಧೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬೆಂಗಳೂರಿನ ಸುಮಾರು 16 ಆಸ್ಪತ್ರೆಗಳಲ್ಲಿ ಸಿಸಿಬಿ ಪರಿಶೀಲನೆ ನಡೆಸಿದೆ. ಈ ಮಧ್ಯೆ, ಬೆಡ್ ಬ್ಲಾಕ್ ಹಗರಣದ ವಿಚಾರದಲ್ಲಿ ರಾಜಕೀಯ ಮುಂದುವರೆದಿದೆ. ಕರ್ತವ್ಯದಲ್ಲಿದ್ದ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಯತ್ನ ನಡೆದ್ರೂ ಶಾಸಕ ಸತೀಶ್ ರೆಡ್ಡಿ ವಿರುದ್ಧ ಕ್ರಮ ಏಕೆ ಆಗಿಲ್ಲ ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದಾರೆ.

ನ್ಯಾಯಾಂಗ ತನಿಖೆಗೆ ಮಾಜಿ ಮಂತ್ರಿ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ. ಆದ್ರೆ, ಸಂಸದ ಪ್ರತಾಪ್ ಸಿಂಹ ಮಾತ್ರ ತೇಜಸ್ವಿ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಬೆನ್ನು ತಟ್ಟಿದ್ದಾರೆ. ಇಂದು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ 2036 ಬೆಡ್ ಲಭ್ಯ ಇವೆ.