ಐಷಾರಾಮಿ ಮದ್ವೆ, 3 ತಿಂಗಳಲ್ಲಿ ಸಂಸಾರ ಬೀದಿಗೆ – ಪತ್ನಿಯನ್ನು ಮನೆಯಿಂದ ಹೊರಹಾಕಿದ ಕುಡುಕ ಪತಿ!

Advertisements

ಬೆಂಗಳೂರು: ಅವಳು ಎಂಜಿನಿಯರ್ ಓದಿಕೊಂಡ ವಿದ್ಯಾವಂತ ಯುವತಿ. ಆದರೆ ಒಬ್ಬನೇ ಮಗ, ಸ್ವಂತ ಮನೆ ಬೇರೆ ಇದೆ ಅಂತಾ ಬಿಬಿಎಂಪಿ ಕಾಂಟ್ರಾಕ್ಟರ್ ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ರ್ಯಾಂಡ್‌ ಆಗಿ ಮದುವೆ ಮಾಡಿಕೊಟ್ಟಿದ್ರು. ಆದ್ರೆ ಮದುವೆಯಾದ ಮೂರೇ ತಿಂಗಳಿಗೆ, ಪತ್ನಿಯನ್ನು ಬಟ್ಟೆ ಬರೇ ಸಮೇತ ಗಂಡನ ಮನೆಯವರು ಬೀದಿಗೆ ತಳ್ಳಿದ್ದಾರೆ.

Advertisements

ಸದ್ಯ ಅನ್ಯಾಯಕ್ಕೊಳಗಾಗಿ ಅಸಹಾಯಕಳಾಗಿ ನಿಂತಿರುವುದು ಬೆಂಗಳೂರಿನ ನಗರವಾಸಿ ಭವ್ಯ. ಈಕೆ ಎಂಜಿನಿಯರಿಂಗ್ ಓದಿದ ವಿದ್ಯಾವಂತೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಒಳ್ಳೆ ಕಡೆಗೆ ಮದುವೆ ಮಾಡಿಕೊಡಬೇಕು ಎಂದು ಪೋಷಕರು, ಮ್ಯಾಟ್ರಿಮೋನಿಯಲ್ಲಿ ಭವ್ಯಳ ಡಿಟೈಲ್ಸ್ ಹಾಕಿದ್ರು. ಅಷ್ಟರಲ್ಲೇ ಓರ್ವ ತಾನು ಬಿಬಿಎಂಪಿ ಕ್ಲಾಸ್-1 ಕಂಟ್ರಾಕ್ಟರ್ ನಾನು ಕೂಡ ಎಂಜಿನಿಯರಿಂಗ್ ಮಾಡಿಕೊಂಡಿದ್ದೀನಿ.

Advertisements

ನಾಗರಭಾವಿಯಲ್ಲಿ ಸ್ವಂತ ಮನೆಯಿದೆ. ಜೊತೆಗೆ ಒಬ್ಬನೇ ಮಗ ಅಂತಾ ಭವ್ಯ ಕುಟುಂಬದ ಬಳಿ ಮದುವೆ ಪ್ರಸ್ತಾಪ ಮಾಡಿದ್ದಾನೆ. ಯುವತಿ ಮನೆಯವರು ಕೂಡ ಹೇಗೋ ನಮ್ ಹುಡುಗಿ ಚೆನ್ನಾಗಿದ್ರೆ ಸಾಕು ಅಂತಾ 50 ಲಕ್ಷ ಖರ್ಚು ಮಾಡಿ ಕಳೆದ ಮೂರು ತಿಂಗಳ ಹಿಂದೆಯೇ ಕೇಳಿದ್ದ ರೆಸಾರ್ಟ್‌ನಲ್ಲೇ ಮದುವೆ ಮಾಡಿಕೊಟ್ಟಿದ್ರು. ಇದನ್ನೂ ಓದಿ: ತೈವಾನ್ ಸುತ್ತ ಚೀನಾ ಮಿಲಿಟರಿಗೆ ತರಬೇತಿ- ಯುದ್ಧಕ್ಕೆ ಸಿದ್ಧತೆ!

Advertisements

ಅತ್ತೆ, ನಾದಿನಿ ಜೊತೆಗೆ ಪ್ರತಿದಿನ ಎಣ್ಣೆಪಾರ್ಟಿ: ಮದುವೆಯಾದ ಒಂದೇ ವಾರಕ್ಕೆ ಈ ಪುರುಷ ಮಹಾಷಯನ ಬಂಡವಾಳ ಬಯಲಾಗೋಕೆ ಶುರುವಾಗಿದೆ. ಎಂಜಿನಿಯರ್ ಅಂತಾ ಮದುವೆಯಾಗಿದ್ದನು ಓದಿರೋದು ಪಿಯುಸಿ ಎಂದು ಗೊತ್ತಾಗಿದೆ. ಕಾಂಟ್ರಕ್ಟರ್ ಅಂದವನು ನಾಯಿಗಳಿಗೆ ಫುಡ್ ಮಾರೋ ಕೆಲಸ ಮಾಡ್ತಿದ್ದನಂತೆ. ಇಷ್ಟೇ ಅಲ್ಲದೇ ಪ್ರತಿದಿನ ಗಂಡ-ಅತ್ತೆ-ಮಾವ-ನಾದಿನಿ ಸೇರಿಕೊಂಡು ಮನೆಯಲ್ಲೇ ಪ್ರತಿದಿನ ಒಟ್ಟಿಗೇ ಕೂತು ಎಣ್ಣೆ ಪಾರ್ಟಿ ಮಾಡುತ್ತಿದ್ದರಂತೆ. ಅದಕ್ಕೆ ಬೇಕಾದ ಎಲ್ಲಾ ಸ್ನಾಕ್ಸ್ ಭವ್ಯಳೇ ಮಾಡಿ ತಗೋಬರಬೇಕಿತ್ತು. `ಏನ್ರಿ ರೀ ಇದು ಅಂತಾ ಪ್ರಶ್ನೇ ಮಾಡಿದ್ರೆ’, ಹೇಳಿದಷ್ಟು ಮಾಡಬೇಕು ಅಂತಾ ಪತ್ನಿ ಮೇಲೆ ಹಿಗ್ಗಾಮುಗ್ಗ ಥಳಿಸುತ್ತಿದ್ದನಂತೆ. ಕಳೆದ ಕೆಲ ದಿನಗಳಿಂದ ಇದೇ ರೀತಿ ಕಿರುಕುಳ ಕೊಡ್ತಿದ್ದ ಗಂಡನ ಮನೆಯವರು. ನಿನ್ನೆ ಏಕಾಏಕಿ ಭವ್ಯಳ ಎಲ್ಲಾ ಬಟ್ಟೆಗಳನ್ನು ಹೊರಗೆ ಎಸೆದು ಆಕೆಯನ್ನು ಸುರಿಯುವ ಮಳೆಯಲ್ಲೇ ಹೊರಗೆ ತಬ್ಬಿದ್ದಾರೆ. ಇದನ್ನೂ ಓದಿ: ಶಿಕ್ಷಕಿ ಕೊಲೆ ಪ್ರಕರಣ- ನಗರಸಭೆ ಕೌನ್ಸಿಲರ್ ಸೇರಿ ನಾಲ್ವರ ಬಂಧನ

ವಿಚಾರ ತಿಳಿದು ಸ್ಥಳಕ್ಕೆ ಬಂದ ಪೋಷಕರು ಮದುವೆಯಾದ ಮೂರೇ ತಿಂಗಳಿಗೆ ಮಗಳ ಈ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ. ಸದ್ಯ ಅನ್ನಪೂರ್ಣೆಶ್ವರಿನಗರ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಆಸ್ತಿ ಅಂತಸ್ತು ಇದೆ ಅಂತಾ ಹಿಂದೆ ಮುಂದೆ ನೋಡದೇ ಮಕ್ಕಳನ್ನು ಮದುವೆ ಮಾಡಿಕೋಡುವ ಮುಂಚೆ ಪೋಷಕರು ಎಚ್ಚರವಹಿಸಬೇಕಿದೆ ಎಂದು ಭವ್ಯಾಳ ಅಣ್ಣ ಪುನೀತ್ ಮನವಿ ಮಾಡಿದ್ದಾರೆ.

Live Tv

Advertisements
Exit mobile version