Connect with us

Bengaluru City

ಚಾಣಕ್ಯ ಬಂದೋದ್ರೂ ಮುಗಿಯದ ಬಿಜೆಪಿ ಅಂತಃಕಲಹ – ಸರ್ಕಾರ ಬರುವಲ್ಲಿ ನಂದೇ ಪಾತ್ರ ಎಂದ ಸಿಪಿವೈ

Published

on

ಬೆಂಗಳೂರು: ಏಳುಬೀಳಿನ ಸಂಪುಟದ ಬಳಿಕ ಬಿಜೆಪಿಯಲ್ಲಿ ಭಿನ್ನಮತದ ಪರ್ವ ಆರಂಭವಾಗಿದೆ.

ಚಾಣಕ್ಯ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಹೋದರೂ ಪಕ್ಷದಲ್ಲಿ ಅತೃಪ್ತಿ ಮಾತ್ರ ಶಮನವಾಗಿಲ್ಲ. ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಬರುತ್ತಿವೆ.

ಸಚಿವ ಯೋಗೇಶ್ವರ್ ಅವರ ಅಸಮಾಧಾನದ ಮಾತು ಇದೀಗ ಹೊಗೆ ಎಬ್ಬಿಸಿದೆ. ಸರ್ಕಾರ ರಚನೆಯಲ್ಲಿ ನಾನು, ನನ್ನ ಪಾತ್ರ ಇದೆ. ನನ್ನ ಅಳಿಸು ಸೇವೆ, ಕೆಲ ಅನಾನುಭವಿ ಶಾಸಕರಿಗೆ ಗೊತ್ತಿಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆ. ಯೋಗೇಶ್ವರ್ ಅವರ ಈ ಮಾತಿಗೆ 3 ಬಾರಿ ಶಾಸಕರಾಗಿರುವ ಅಭಯ್ ಪಾಟೀಲ್ ರೊಚ್ಚಿಗೆದ್ದಿದ್ದಾರೆ.

ಯೋಗೇಶ್ವರ್ ಪಾತ್ರ ನಂಗೊತ್ತಿಲ್ಲ 1990ರಲ್ಲಿ ಪಕ್ಷ ಸಂಘಟನೆ ವೇಳೆ ಎಲ್ಲಿದ್ರು..?, ಯೊಗೇಶ್ವರ್ ನಮಗೆ ಹೇಳುವ ಅಗತ್ಯವಿಲ್ಲ ಎಂದು ಸೈನಿಕನ ವಿರುದ್ಧ ಅಭಯ್ ಪಾಟೀಲ್ ಹರಿಹಾಯ್ದಿದ್ದಾರೆ.

Click to comment

Leave a Reply

Your email address will not be published. Required fields are marked *