ರಿಲೇಶನ್‌ಶಿಪ್‌ನಲ್ಲಿ ಡಿಸ್ಟೆನ್ಸ್ ಹೆಚ್ಚಾಗಿದ್ದಕ್ಕೆ ಪ್ರಿಯಕರನಿಗೆ ಗುಂಡಿಟ್ಟ ಕಿರಾತಕಿ

Advertisements

ಕೋಲ್ಕತ್ತಾ: ಸಿನಿಮಾದಲ್ಲಿ ಬರುವ ಕಥೆಯ ಹಾಗೇ 22 ವರ್ಷದ ಯುವತಿಯಬ್ಬಳು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದ ಪ್ರಿಯಕರನ ಮೇಲೆ ಗುಂಡು ಹಾರಿಸಿರುವ ಘಟನೆ ಪಶ್ಚಿಮ ಬಂಗಾಳದ ಪೂರ್ಬಾ ಬರ್ಧಮಾನ್  ಜಿಲ್ಲೆಯಲ್ಲಿ ನಡೆದಿದೆ.

Advertisements

ಯುವತಿ ತನ್ನ ಪ್ರಿಯಕರನಿಗೆ ಚುಂಬಿಸಲು ಹೋದಾಗ ಸಿಗರೇಟ್ ವಾಸನೆ ಬಂದಿದ್ದು, ಅಲ್ಲದೇ ತಮ್ಮ ರಿಲೇಶನ್ ಶಿಪ್‍ನಲ್ಲಿ ಹೆಚ್ಚುತ್ತಿರುವ ಅಂತರದಿಂದ ಬೇಸತ್ತು ಪ್ರಿಯಕರನಿಗೆ ಗುಂಡು ಹಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ವಿದ್ಯಾರ್ಥಿ ಸಾವು – ನುಚ್ಚು ನೂರಾದ ಮೆಡಿಕಲ್ ಕನಸು

Advertisements

ಸದ್ಯ ಬುಲೆಟ್‍ನಿಂದ ಹೊಟ್ಟೆಗೆ ತೀವ್ರವಾಗಿ ಗಾಯಗೊಂಡಿರುವ 22 ವರ್ಷದ ಪ್ರಿಯಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬುಧವಾರ ರಾತ್ರಿ ಕಟ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಕೇಶಿಯಾ ಗ್ರಾಮದಲ್ಲಿ ನಡೆದಿದ್ದು, ಯುವಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisements

ಯುವತಿ ಕೆಲವು ತಿಂಗಳ ಹಿಂದೆ ಉದ್ಯೋಗಕ್ಕಾಗಿ ಹೋಗಿದ್ದಳು. ನಂತರ ಹಿಂದಿರುಗಿದ ಬಳಿಕ ಪ್ರಿಯಕರನನ್ನು ಸ್ಥಳೀಯ ಸರ್ಕಲ್ ಗ್ರೌಂಡ್‍ವೊಂದರಲ್ಲಿ ಭೇಟಿಯಾಗುವಂತೆ ತಿಳಿಸಿದ್ದಳು. ಈ ವೇಳೆ ಭೇಟಿಯಾದ ಪ್ರಿಯಕರನನ್ನು ತಬ್ಬಿ, ಚುಂಬಿಸಿದಾಗ ಆತ ಸಿಗರೇಟ್ ಸೇದಿರುವ ವಾಸನೆ ಬಂದಿದೆ. ಇದರಿಂದ ಕೋಪಗೊಂಡ ಯುವತಿ ಇದ್ದಕ್ಕಿದ್ದಂತೆ ಗನ್ ತೆಗೆದು ಪ್ರಿಯಕರನಿಗೆ ಗುಂಡು ಹಾರಿಸಿದ್ದಾಳೆ ಎಂದು ಯುವಕ ದೂರು ನೀಡಿದ್ದಾನೆ.  ಇದನ್ನೂ ಓದಿ: ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಕೊಂದ – ಕೊನೆಗೆ ತಾನೂ ಸತ್ತ

ಅದೃಷ್ಟವಶಾತ್ ಘಟನೆ ವೇಳೆ ಯುವಕ ಪಾರಾಗಿದ್ದು, ಯುವತಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಇದೀಗ ಯುವತಿಯನ್ನು ಪೊಲೀಸರು ಬಂದಿಸಿದ್ದು, ಆಕೆಯ ಬಳಿ ಇದ್ದ ಬಂದೂಕು ಮತ್ತು ಕಾಟ್ರ್ರಿಜ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisements
Exit mobile version