Connect with us

Bengaluru City

ಪರಪ್ಪನ ಅಗ್ರಹಾರ ಸೇರಿದ ದೇಶದ್ರೋಹಿ ಆರ್ದ್ರಾ

Published

on

ಬೆಂಗಳೂರು: ಪಾಕಿಸ್ತಾನದ ಪರ ಘೋಷಣೆ ಕೂಗಿ ಪೊಲೀಸರ ಅತಿಥಿಯಾಗಿದ್ದ ದೇಶದ್ರೋಹಿ ಆರ್ದ್ರಾ ನಾರಾಯಣ್‍ಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದೆ.

ಗುರುವಾರ ಸಿಎಎ ಮತ್ತು ಎನ್‍.ಆರ್.ಸಿ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅಮೂಲ್ಯಾ ಲಿಯೋನ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಳು. ಇದನ್ನು ವಿರೋಧಿಸಿ ಟೌನ್ ಹಾಲ್ ಬಳಿ ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದವು. ಈ ವೇಳೆ ಅಲ್ಲಿಗೆ ಬಂದಿದ್ದ ಆರ್ದ್ರಾ ಪಾಕಿಸ್ತಾನದ ಪರ ಘೋಷಣೆ ಕೂಗಿದಾಗ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು.

ನಂತರ ಆಕೆಯ ಮೇಲೆ ಕೇಸು ದಾಖಲಿಸಿದ್ದ ಪೊಲೀಸರು, ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿ 6ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಮೂರ್ತಿ ಕೃಷ್ಣಮೂರ್ತಿಯ ಅವರು, ಆರ್ದ್ರಾ ಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಮುಂದಿನ ತಿಂಗಳು ಮಾರ್ಚ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.

ಅಲ್ಪಸಂಖ್ಯಾತ ಲೈಂಗಿಕ ಶೋಷಿತ ಹೋರಾಟಗಾರ್ತಿ ಆರ್ದ್ರಾ ನಾರಾಯಣ್‍ಳನ್ನು ನ್ಯಾಯಾಂಗ ಬಂಧನದಕ್ಕೆ ನೀಡದ ಹಿನ್ನೆಲೆ ಪೊಲೀಸ್ ಭದ್ರತೆಯಲ್ಲಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ಆಕೆಯನ್ನು ಕಾರಾಗೃಹದಲ್ಲಿ ವೈದ್ಯರು ವೈದ್ಯಕೀಯ ತಪಾಸಣೆ ನಡೆಸಿದ್ದಾರೆ.

ಯಾರು ಈ ಆರ್ದ್ರಾ ನಾರಾಯಣನ್:
ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾಗಿರುವ ನಾರಾಯಣನ್ ಪುತ್ರಿ ಆರ್ದ್ರಾ. ಬೆಂಗಳೂರಿನಲ್ಲಿಯೇ ಮನೆ ಹೊಂದಿದ್ದರೂ ಆರ್ದ್ರಾ ಪಿಜಿಯಲ್ಲಿ ವಾಸವಾಗಿದ್ದಳು. ಆರ್ದ್ರಾ ಪೋಷಕರು ಖಾಸಗಿ ಕಂಪನಿಯ ಉದ್ಯೋಗಿಗಳು ಎಂದು ತಿಳಿದು ಬಂದಿದೆ. ಟ್ರಾನ್ಸಜೆಂಡರ್ ಆಗಿರುವ ಆರ್ದ್ರಾ, ಲೈಂಗಿಕ ಅಲ್ಪಸಂಖ್ಯಾತರ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾಳೆ. ಡಿಸೈನರ್ ಆಗಿ ಕೆಲಸ ಮಾಡಿಕೊಂಡಿರುವ ಆರ್ದ್ರಾ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಳು. ಆರ್ದ್ರಾ ಮತ್ತು ಅಮೂಲ್ಯ ಇಬ್ಬರು ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ದೆಹಲಿಯ ಇಂದಿರಾಗಾಂಧಿ ಮುಕ್ತ ವಿವಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.

ಪಾಕ್ ಪರ ಘೋಷಣೆ ಕೂಗುತ್ತಿದ್ದಂತೆ ಪ್ರತಿಭಟನಾ ಸ್ಥಳದಲ್ಲಿದ್ದ ಪೊಲೀಸರುಆರ್ದ್ರಾ ಳನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ನನ್ನ ಲೈಫ್ ನನ್ನ ಚಾಯ್ಸ್. ಮಾತನಾಡಲು ನನಗೆ ಸ್ವಾತಂತ್ರವಿದೆ. ನನ್ನ ಸ್ವತಂತ್ರಕ್ಕೆ ಅಡ್ಡಿ ಆಗೋಕೆ ನೀವ್ಯಾರು?. ಗುರುವಾರ ಬಂಧಿತಳಾಗಿರುವ ಅಮೂಲ್ಯ ನನ್ನ ಫೇಸ್‍ಬುಕ್ ಫ್ರೆಂಡ್. ನಾನು ಆಕೆಯಿಂದ ಪ್ರೇರಿಪಿತಳಾಗಿಲ್ಲ. ನನ್ನ ಸಿದ್ಧಾಂತವನ್ನು ನಾನು ಹೇಳಿದ್ದೇನೆ ಎಂದು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾಳೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಈ ಬಗ್ಗೆ ಮಾತನಾಡಿದ ಆರ್ದ್ರಾ ಅವರ ತಾತ ರಾಮಮೂರ್ತಿ ಅವರು, ಆಕೆ ನನ್ನ ಮೊಮ್ಮಗಳಲ್ಲ, ನನ್ನ ಮೊಮ್ಮಗಳೇ ಬೇರೆ ಅವಳ ಹೆಸರು ಅನ್ನಪೂರ್ಣ. ಆಕೆ ತನ್ನ ಸ್ನೇಹಿತರ ಜೊತೆ ಸೇರಿ ಪ್ರೇರೆಪಿತಳಾಗಿ ಈ ರೀತಿ ಮಾಡುತ್ತಿದ್ದಾಳೆ. ಅದನ್ನು ಬಿಟ್ಟರೆ ಅವಳು ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದ್ದಾರೆ.