Connect with us

ಬಿಪಿಎಲ್ ಕುಟುಂಬಗಳಿಗೆ ತಲಾ 5 ಸಾವಿರ ಕೊರೊನಾ ಪರಿಹಾರ

ಬಿಪಿಎಲ್ ಕುಟುಂಬಗಳಿಗೆ ತಲಾ 5 ಸಾವಿರ ಕೊರೊನಾ ಪರಿಹಾರ

ಚಂಡೀಗಢ: ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿ ಮಾಡಿದ್ದು, ಬಡವರ ಸಂಕಷ್ಟಕ್ಕೆ ಸಿಲಿಕಿದ್ದಾರೆ. ಕೂಲಿ ಕಾರ್ಮಿಕರು ಸೇರಿದಂತೆ ಬಡವರ್ಗದ ಜೀವನಾಧಾರಕ್ಕೆ ಹೊಡೆತ ಬಿದ್ದೊರೋ ಹಿನ್ನೆಲೆಯಲ್ಲಿ ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಸರ್ಕಾರ ಪರಿಹಾರ ಹಣ ನೀಡಲಾಗಿದೆ.

ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ(ಬಡತನ ರೇಖೆಗಿಂತ ಕೇಳಗಿರುವವರಿಗೆ) ಕೊರೊನಾ ಪರಿಹಾರವಾಗಿ ತಲಾ 5 ಸಾವಿರ ರೂಪಾಯಿ ಹಣ ನೀಡುವುದಾಗಿ ಗೃಹ ಸಚಿವ ಅನಿಲ್ ವಿಜ್ ನಿನ್ನೆ ಹೇಳಿದ್ದಾರೆ.

ಕೊರೊನಾ ಅಬ್ಬರ ತಗ್ಗಿಸಲು ಕಳೆದ ಭಾನುವಾರ ಹರಿಯಾಣ ಸರ್ಕಾರ ಲಾಕ್‍ಡೌನ್ ವಿಸ್ತರಣೆ ಮಾಡಿದೆ. ಮೇ10 ರಿಂದ 17ರವರೆಗೆ ಒಂದು ವಾರದ ಕಾಲ ಸುರಕ್ಷಿತ್ ಹರಿಯಾಣ ಹೆಸರಲ್ಲಿ ಮಾರ್ಗಸೂಚಿ ಜಾರಿ ಮಾಡಲಾಗಿದೆ. ಇದರ ಅಡಿಯಲ್ಲಿ ಮೊದಲನೇ ಲಾಕ್‍ಡೌನ್ ನಿಮಯಗಳ ಜೊತೆಗೆ ಹಲವು ಕಠಿಣ ನಿಯಮಗಳನ್ನು ಸೇರಿಸಲಾಗಿದೆ. ಮದುವೆ, ಅಂತ್ಯಸಂಸ್ಕಾರ ಸೇರಿದಂತೆ ಯಾವುದೇ ಸ್ಥಳದಲ್ಲಿ 11ಕ್ಕಿಂತ ಹೆಚ್ಚಿನ ಜನರು ಒಂದೆಡೆ ಸೇರುವಂತಿಲ್ಲ. ಹಾಗೇ ಯಾವುದೇ ರೀತಿ ಮೆರವಣಿಗೆ ಸಡೆಸದಂತೆ ನಿಷೇಧ ವಿಧಿಸಲಾಗಿದೆ.

Advertisement
Advertisement