Connect with us

Bellary

ಪೌರಕಾರ್ಮಿಕನ ಮಗನಿಗೆ ಲ್ಯಾಪ್‍ಟಾಪ್ ವಿತರಿಸಿ ಶುಭಕೋರಿದ ಡಿಸಿ

Published

on

ಬಳ್ಳಾರಿ: ಜಿಲ್ಲೆಯ ಸಂಡೂರು ಪುರಸಭೆಯ ಪೌರ ಕಾರ್ಮಿಕರಾದ ಗಿರಿಯಪ್ಪರವರ ಮಗ ಯಾಹನ್ ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.98.88 ಅಂಕಗಳನ್ನು ಪಡೆದು ಸಂಡೂರು ತಾಲೂಕಿಗೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

ಸಂಡೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪೌರ ಕಾರ್ಮಿಕನ ಮಗ ಯಾಹನ್ ಅವರಿಗೆ ಸಂಡೂರು ಪುರಸಭೆ ಅನುದಾನದ ಅಡಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ಲ್ಯಾಪ್ ಟಾಪ್ ವಿತರಿಸಿಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಕುಲ್ ಅವರು ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಮೇಶ್ ಬಿ.ಎಸ್, ಸಂಡೂರು ಪುರಸಭೆಯ ಮುಖ್ಯಾಧಿಕಾರಿ ಎಸ್.ಸತ್ಯನಾರಾಯಣರಾವ್ ಹಾಗೂ ವಿದ್ಯಾರ್ಥಿಯ ತಂದೆ-ತಾಯಿ ಹಾಜರಿದ್ದರು.

Click to comment

Leave a Reply

Your email address will not be published. Required fields are marked *