Bellary
ಸಚಿವ ಶ್ರೀರಾಮುಲು ಮನೆ ಆವರಣದಲ್ಲಿ ಅಗ್ನಿ ಅವಘಡ

ಬಳ್ಳಾರಿ: ಸಚಿವ ಶ್ರೀರಾಮುಲು ಅವರ ಮನೆಯ ಆವರಣದಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ.
ಮನೆಯ ಹೊರಭಾಗದಲ್ಲಿ ಇರಿಸಲಾಗಿದ್ದ ಜನರೇಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಭಾರೀ ಶಬ್ದ ಕೇಳಿಬಂದಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕದ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಘಟನೆಯಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಜನರೇಟರ್ ಸುಟ್ಟು ಕರಕಲಾಗಿದೆ. ಈ ಹಿಂದೆ ಅಂದರೆ 2017ರ ಡೆಸೆಂಬರ್ ತಿಂಗಳಿನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಶಾರ್ಟ್ ಸಕ್ರ್ಯೂಟ್ ನಿಂದಾಗಿ ದೆಹಲಿಯ ಪಿರೋಝ್ ಷಾ ರಸ್ತೆಯಲ್ಲಿರುವ ನಿವಾಸದ ಬೆಡ್ ರೂಂ ಧಗಧಗ ಹೊತ್ತಿ ಉರಿದಿತ್ತು. ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ರೂಂನಲ್ಲಿದ್ದ ಬೆಡ್, ಸೋಪಾ ಸುಟ್ಟು ಕರಕಲಾಗಿತ್ತು.
ಸಂಸದರು ಮಲಗಿದ್ದ ರೂಂ ನಲ್ಲೇ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ನಂತ್ರ ಕರ್ಟನ್ ಮೂಲಕ ಸೋಫಾಗೆ ಹೊತ್ತಿಕೊಂಡು ಬೃಹತ್ ಸ್ವರೂಪ ಪಡೆದ ಅಗ್ನಿ ಜ್ವಾಲೆಗೆ ಶ್ರೀರಾಮುಲು ಬೆಡ್, ಸೋಫಾ ಸುಟ್ಟು ಕರಕಲಾಗಿತ್ತು. ಘಟನೆಯಿಂದ ಸಂಸದರ ಕೊಠಡಿ ಹೊರತು ಪಡಿಸಿ ಉಳಿದ ಭಾಗ ಸೇಫ್ ಆಗಿತ್ತು.
