Connect with us

Bellary

ಫಿಕ್ಸ್ ಆಗಿ ತಿಂಗಳು ಕಳೆದ್ರೂ ಮದುವೆ ಮಾಡಿಸದ್ದಕ್ಕೆ ಟವರ್ ಏರಿದ ಭೂಪ..!

Published

on

Share this

ಬಳ್ಳಾರಿ: ಹುಡುಗಿ ಫಿಕ್ಸ್ ಆಗಿ ತಿಂಗಳುಗಳು ಕಳೆದರೂ ಮನೇಲಿ ಬೇಗ ಮದುವೆ ಮಾಡದಿದ್ದಕ್ಕೆ ಮನನೊಂದು ಯುವಕನೊಬ್ಬ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಷಕರಿಗೆ ಬೆದರಿಕೆ ಹಾಕಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಚಿರಂಜೀವಿ (23) ಎಂಬ ಯುವಕ ಯಾರೂ ಇಲ್ಲದ ಸಮಯದಲ್ಲಿ ಸಿನಿಮಾ ಟಾಕೀಸ್ ರಸ್ತೆಯಲ್ಲಿರುವ ಟವರ್ ಏರಿ ಕುಳಿತು ನನಗ ಬೇಗ ಮದುವೆ ಮಾಡಿಸಿ ಇಲ್ಲವಾದಲ್ಲಿ ನಾನು ಇಲ್ಲಿಂದ ಹಾರಿ ಪ್ರಾಣ ಬಿಡುತ್ತೆನೆ ಎಂದು ಬೇದರಿಕೆ ಹಾಕಿದ್ದಾನೆ.

ಈಗಾಗಲೇ ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಪೋಷಕರೊಂದಿಗೆ ಮಾತುಕತೆ ಕೂಡ ಮುಗಿದಿದೆ. ಆದರೆ ಈ ಯುವಕನಿಗೆ ಒಬ್ಬ ಅಣ್ಣ ನಿದ್ದಾನೆ ಅವನಿಗೂ ಹುಡುಗಿ ಫಿಕ್ಸ್ ಮಾಡಿಕೊಂಡು ಇಬ್ಬರಿಗೂ ಒಟ್ಟಿಗೆ ಮದುವೆ ಮಾಡುವ ನಿರೀಕ್ಷೆಯಲ್ಲಿ ಕುಟುಂಬವಿದೆ. ಆದರೆ ಈತನ ಅಣ್ಣನಿಗೆ ಬೇಗ ಹುಡುಗಿ ಸಿಗುತ್ತಿಲ್ಲ. ಹೀಗಾಗಿ ಮದುವೆ ಡಿಲೇ ಆಗುತ್ತಿದೆ. ಆದರೆ ಈತ ಮಾತ್ರ ನನಗೆ ಬೇಗ ಮದುವೆ ಮಾಡಿಸಿ ಎಂದು ಹಠ ಹಿಡಿದಿದ್ದಾನೆ.

ಈ ಹಿಂದೆ ಕೂಡ ಚಿರಂಜೀವಿ ಮದುವೆಗಾಗಿ ಹಠ ಮಾಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಜೆಸ್ಕಾಂ ಗೆ ಕರೆ ಮಾಡಿ ಟವರ್ ಕಂಬಕ್ಕೆ ಇದ್ದ ವಿದ್ಯುತ್ ಸಂಪರ್ಕ ವನ್ನ ಕಟ್ ಮಾಡಿಸಿದ್ದಾರೆ. ತದನಂತರ ಹುಡುಗನೊಂದಿಗೆ ಮಾತನಾಡಿ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement