Sunday, 19th May 2019

ಜೈಲು ಸೇರಿ ಕುಖ್ಯಾತಿ ಪಡೆದ ಗಣಿನಾಡಿನ ಶಾಸಕರು..!

ಬಳ್ಳಾರಿ: ಗಣಿ ನಾಡಿನ ರಾಜಕಾರಣಿಗಳಿಗೂ ಜೈಲಿಗೂ ಏನೂ ಬಿಡಿಸಲಾಗದ ನಂಟು. ಜಿಲ್ಲೆಯ ದೊಡ್ಡ ದೊಡ್ಡ ರಾಜಕಾರಣಿಗಳು ಅಕ್ರಮ, ಹಗರಣ, ಅವಾಜ್ ಹೀಗೆ ಒಂದಿಲ್ಲೊಂದು ಕೇಸ್‍ನಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ.

ಹೌದು. ಜಿಲ್ಲೆಯ ಶಾಸಕರು ಅಭಿವೃದ್ಧಿ, ಪರೋಪಕಾರ ಮಾಡಿ ಸುದ್ದಿ ಮಾಡಿದ್ದು ತೀರಾ ಕಡಿಮೆ. ಆದ್ರೆ ಅಕ್ರಮ, ಅನ್ಯಾಯ, ಹಲ್ಲೆ, ಲೂಟಿ ಮಾಡಿ ದೇಶಾದ್ಯಂತ ಸುದ್ದಿ ಮಾಡಿ ಕುಖ್ಯಾತಿ ಪ್ರಖ್ಯಾತಿ ಪಡೆದಿದ್ದೆ ಹೆಚ್ಚು. ಹೀಗಾಗಿಯೇ ರಾಜ್ಯದಲ್ಲೆ ಅತಿ ಹೆಚ್ಚು ಜೈಲು ವಾಸ ಅನುಭವಿಸಿದ ಶಾಸಕರ ಹಿರಿಮೆಯ ಗರಿ ಬಳ್ಳಾರಿ ಶಾಸಕರಿಗೆ ಇದೆ.

ಬಳ್ಳಾರಿ ಜಿಲ್ಲೆಯಿಂದ ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತಾರು ಶಾಸಕರು ಜೈಲುವಾಸ ಅನುಭವಿಸಿ ಬಂದಿದ್ದಾರೆ. ಇವರ ಲಿಸ್ಟ್ ಗೆ ಇದೀಗ ಕಂಪ್ಲಿ ಶಾಸಕ ಸಹ ಸೇರ್ಪಡೆಯಾಗುತ್ತಿದ್ದಾರೆ.

ಯಾರ್ಯಾರೂ ಜೈಲಿಗೆ ಹೋಗಿ ಬಂದಿದ್ದಾರೆ..?
1) ಗಾಲಿ ಜನಾರ್ದನ ರೆಡ್ಡಿ
– ಅಕ್ರಮ ಗಣಿಗಾರಿಕೆ, ಜಾಮೀನು ಪಡೆಯಲು ಸಿಬಿಐ ಜಡ್ಜ್‍ಗೆ ಲಂಚ ಕೊಡಲು ಹೋಗಿ ಸಿಕ್ಕಿಬಿದ್ದ ಕೇಸ್, ಆ್ಯಂಬಿಡೆಂಟ್ ವಂಚನೆ ಪ್ರಕರಣ
– ಮೂರು ಬಾರಿ ಜೈಲಿಗೆ, ಮೂರುವರೆ ವರ್ಷ ಜೈಲುವಾಸ, ಸದ್ಯಕ್ಕೆ ಕೋರ್ಟ್ ಅನುಮತಿ ಇಲ್ಲದೆ ಬಳ್ಳಾರಿಗೆ ಹೋಗುವಂತಿಲ್ಲ

2) ಜಿ ಸೋಮಶೇಖರರೆಡ್ಡಿ
– ಸದ್ಯ ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಶಾಸಕ
– ಅಕ್ರಮ ಗಣಿಗಾರಿಕೆ ತನಿಖೆ ವೇಳೆ ಜನಾರ್ದನ ರೆಡ್ಡಿಗೆ ಬೇಲ್ ಕೊಡಿಸುವ ಸಲುವಾಗಿ ಸಿಬಿಐ ಜಡ್ಜ್‍ಗೆ ಲಂಚ ಕೊಟ್ಟ ಪ್ರಕರಣ
– 1 ವರ್ಷಕ್ಕೂ ಅಧಿಕ ಸಮಯ ಕಂಬಿ ಎಣಿಸಿದ್ದ ಜನಾರ್ದನ ರೆಡ್ಡಿ ಸಹೋದರ

3) ಸುರೇಶ್ ಬಾಬು
– ಕಂಪ್ಲಿ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ
– ಮೂರು ಬಾರಿ ಜೈಲು ಸೇರಿದ್ದರು, ಒಟ್ಟು 2 ವರ್ಷ ಜೈಲು ವಾಸ
– ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಾಟ, ರೆಡ್ಡಿ ಜಾಮೀನಿಗಾಗಿ ಸಿಬಿಐ ಜಡ್ಜ್‍ಗೆ ಲಂಚ ಕೊಟ್ಟ ಪ್ರಕರಣ

4) ಅನಿಲ್ ಲಾಡ್
– ಬಳ್ಳಾರಿ ನಗರ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ
– ಬೇಲೆಕೇರಿ ಬಂದರಿನಿಂದ ವಿದೇಶಕ್ಕೆ ಅಕ್ರಮ ಅದಿರು ಸಾಗಾಟ, ಲೋಕಾಯುಕ್ತ ಎಸ್‍ಐಟಿಯಿಂದ ಬಂಧನ
– 1 ತಿಂಗಳಿಗೂ ಹೆಚ್ಚು ಕಾಲ ಜೈಲಲ್ಲಿದ್ದ ಅನಿಲ್ ಲಾಡ್

5) ಆನಂದ್ ಸಿಂಗ್
– ಹೊಸಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ
– ಬಿಜೆಪಿ ಶಾಸಕರಾಗಿದ್ದಾಗ ಅಕ್ರಮ ಗಣಿಗಾರಿಕೆ ಕೇಸಲ್ಲಿ ಸಿಬಿಐನಿಂದ ಬಂಧನ, 2 ವರ್ಷ ಜೈಲಲ್ಲಿದ್ದರು

6) ಬಿ ನಾಗೇಂದ್ರ
– ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ
– ಕೂಡ್ಲಗಿ ಶಾಸಕರಾಗಿದ್ದಾಗ ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಾಟ ಕೇಸಲ್ಲಿ ಒಂದೂವರೆ ವರ್ಷ ಜೈಲಲ್ಲಿದ್ದರು

7) ದಿವಾಕರಬಾಬು (ಮಾಜಿ ಸಚಿವರು )
– ಬಳ್ಳಾರಿ ನಗರ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ
– 2008ರಲ್ಲಿ ಜನಾರ್ದನ ರೆಡ್ಡಿ ವಿರುದ್ಧದ ಹೋರಾಟ ವೇಳೆ ಅರಣ್ಯ ಇಲಾಖೆ ಕಚೇರಿ ಧ್ವಂಸ, ಅರಣ್ಯಾಧಿಕಾರಿ ಮೇಲೆ ಹಲ್ಲೆ
– 13 ದಿನ ಜೈಲಲ್ಲಿದ್ದ ದಿವಾಕರಬಾಬು
ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ 13 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದಾರೆ,

8) ಜೆ ಎನ್ ಗಣೇಶ
– ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ
– ಶಾಸಕ ಆನಂದ್ ಸಿಂಗ್ ಮೇಲಿನ ಕೇಸಲ್ಲಿ ಜೈಲು ಪಾಲಾಗುವ ಸಾಧ್ಯತೆ
– ಈ ಹಿಂದೆ ರೌಡಿಶೀಟರ್ ಪಟ್ಟಿಯಲ್ಲಿದ್ದ ಜೆ ಎನ್ ಗಣೇಶ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *