Connect with us

Belgaum

ಮನೆಯ ಮೇಲೆ ಕುಸಿದ ಗೋಡೆ- ನಾಲ್ವರ ರಕ್ಷಣೆ

Published

on

ಬೆಳಗಾವಿ: ಮನೆಯ ಮೇಲೆ ಗೋಡೆ ಕುಸಿದು ಅವಶೇಷಗಳಡಿ ಸಿಲುಕಿದ್ದ ನಾಲ್ವರನ್ನು ರಕ್ಷಣೆ ಮಾಡಿರುವ ಘಟನೆ ಬೆಳಗಾವಿಯ ಗೋಂದಳಿ ಗಲ್ಲಿಯಲ್ಲಿ ನಡೆದಿದೆ.

ಡಾಕ್ಟರ್ ಕೋಟೂರು ಎಂಬವರಿಗೆ ಸೇರಿದ ಹಳೆಯ ಮನೆ ನಿರಂತರ ಮಳೆಯಿಂದಾಗಿ ಮತ್ತಷ್ಟು ಶಿಥಿಲಾವಸ್ಥೆಗೊಂಡಿತ್ತು. ಶನಿವಾರ ಬೆಳಗ್ಗೆಯಿಂದ ಸುರಿದ ನಿರಂತರ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿದ್ದ ಗೋಡೆ ಕುಸಿದಿದ್ದರಿಂದ ಮನೆಯಲ್ಲಿಯೇ ನಾಲ್ಕಕ್ಕೂ ಹೆಚ್ಚು ಜನರು ಸಿಲುಕಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಎಸ್‍ಡಿಆರ್‍ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಮನೆಯಲ್ಲಿದ್ದ ಎಲ್ಲರನ್ನೂ ರಕ್ಷಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಮಧ್ಯೆ ದಿಢೀರ್ ಮನೆಗೋಡೆ ಕುಸಿದಿದ್ದರಿಂದ ಬಡಾವಣೆ ಜನರು ಕೆಲಕಾಲ ಆತಂಕಗೊಂಡಿದ್ದರು. ಮನೆಗೋಡೆ ಕುಸಿದು ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *