Connect with us

ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಗುಂಡಿ ತೋಡಿಸಿ ಕಳ್ಳ ಮಾರ್ಗ ಬಂದ್ ಮಾಡಿಸಿದ ಜಿಲ್ಲಾಡಳಿತ

ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಗುಂಡಿ ತೋಡಿಸಿ ಕಳ್ಳ ಮಾರ್ಗ ಬಂದ್ ಮಾಡಿಸಿದ ಜಿಲ್ಲಾಡಳಿತ

ಚಿಕ್ಕೋಡಿ(ಬೆಳಗಾವಿ): ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಬೆಳಗಾವಿ ಜಿಲ್ಲಾಡಳಿತ ಮಹಾರಾಷ್ಟ್ರದಿಂದ ಕಳ್ಳ ಮಾರ್ಗವಾಗಿ ಬೆಳಗಾವಿ ಜಿಲ್ಲೆಗೆ ಸಂಚಾರ ಮಾಡುತ್ತಿದ್ದ ರಸ್ತೆಯನ್ನ ಬಂದ್ ಮಾಡಿಸಿದೆ.

ಮಹಾರಾಷ್ಟ್ರದ ನಾಗನೂರು ಹಾಗೂ ಕರ್ನಾಟಕ ರಾಜ್ಯದ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಕಳ್ಳ ಮಾರ್ಗವನ್ನ ಪೊಲೀಸರು ಗುಂಡಿ ತೋಡುವುದರ ಮೂಲಕ ಬಂದ್ ಮಾಡಿಸಿದ್ದಾರೆ.

 ಆರ್‌ಟಿಪಿಸಿಆರ್‌ ವರದಿ ನೆಗೆಟಿವ್ ಇದ್ದರೆ ಮಾತ್ರ ರಾಜ್ಯ ಪ್ರವೇಶ ಹಿನ್ನೆಲೆಯಲ್ಲಿ ಕಳ್ಳ ಮಾರ್ಗದ ಮೂಲಕ ಜನ ಸಂಚಾರ ಮಾಡುತ್ತಿದ್ದರು. ಕೊರೊನಾ ವರದಿ ಇಲ್ಲದೇ ಜನ ಸಂಚಾರ ಮಾಡುತ್ತಿದ್ದರು. ಮಹಾರಾಷ್ಟ್ರದ ಗಡಹಿಂಗ್ಲಜ್ ಕೊಲ್ಹಾಪುರ ಮಾರ್ಗವಾಗಿ ಜನ ಈ ಕಳ್ಳ ದಾರಿಯ ಮೂಲಕ ಸಂಚಾರ ಮಾಡುತ್ತಿದ್ದರು.

ಕೊರೊನಾ ಆಗಂತುಕರು ನಿರಾಯಾಸವಾಗಿ ಕೊರೊನಾ ಹೊತ್ತು ಕಳ್ಳ ಮಾರ್ಗದ ಮೂಲಕ ಸಂಚಾರ ಮಾಡುವ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತ ಬೆಳಗಾವಿ ಜಿಲ್ಲಾಡಾಳಿತ ರಸ್ತೆಯನ್ನು ಬಂದ್ ಮಾಡಿಸಿದೆ.

ಹುಕ್ಕೇರಿ ತಾಲೂಕಿನ ಗೋಟೂರ – ನಾಗನೂರು ಗ್ರಾಮದ ಸಂಪರ್ಕ ರಸ್ತೆಯನ್ನ ಸಂಕೇಶ್ವರ ಪಿಎಸ್‍ಐ ಗಣಪತಿ ಕುಗನೋಳಿಗುಂಡಿ ತೋಡಿಸಿ ರಸ್ತೆ ಬಂದ್ ಮಾಡಿಸಿದ್ದಾರೆ. ಹೀಗಾಗಿ ಪಬ್ಲಿಕ್ ವರದಿಯಿಂದ ಕಳ್ಳ ಮಾರ್ಗಕ್ಕೆ ಬ್ರೇಕ್ ಬಿದ್ದಂತಾಗಿದೆ.

Advertisement
Advertisement