– ಪೊಲೀಸರಿಗೆ ಶಾಸಕ ಕ್ಲಾಸ್
ದಾವಣಗೆರೆ: ಚಂದ್ರಶೇಖರ್ (Chandrashekhar) ಸಾವಿಗೂ ಮುನ್ನ ತನ್ನ ಕ್ಲಾಸ್ಮೇಟ್ಗಳಾಗಿದ್ದ ಚರಣ್, ಸಂಜಯ್ ಭೇಟಿಗೆ ಹಾತೊರೆಯುತ್ತಿದ್ದ ಅನ್ನೋ ವಿಷಯವೂ ಬೆಳಕಿಗೆ ಬಂದಿದೆ.
ಪಬ್ಲಿಕ್ ಟಿವಿ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಚರಣ್ (Charan), ಚಂದ್ರು ನಮಗೆ ಕಾಲ್ ಮಾಡಿದ್ದಾಗ ಶಾಂತವಾಗೇ ಇದ್ದ, ಯಾವುದೇ ಒತ್ತಡದಲ್ಲಿ ಇರಲಿಲ್ಲ ಅಂದಿದ್ದಾರೆ. ಇದನ್ನೂ ಓದಿ: ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ- ಮೃತ ಚಂದ್ರು ತಂದೆ ಗಂಭೀರ ಆರೋಪ
ಶಿವಮೊಗ್ಗದ ಮತ್ತೋರ್ವ ಸ್ನೇಹಿತ ಉತ್ತಮ್ (Uttam) ಕೂಡ ಮಾತನಾಡಿದ್ದು, ಅ.30ರಂದು ಗೌರಿಗದ್ದೆಗೆ ನಾನೂ ಹೋಗಬೇಕಿತ್ತು. ಆದರೆ ಅನಾರೋಗ್ಯದಿಂದ ಹೋಗೋಕೆ ಆಗಲಿಲ್ಲ ಅಂತ ಚಂದ್ರು ಜೊತೆಗಿನ ಒಡನಾಟವನ್ನೂ ಹಂಚಿಕೊಂಡಿದ್ದಾರೆ. ಚಂದ್ರು ನಾಪತ್ತೆಯಾದ ಭಾನುವಾರ ರಾತ್ರಿ 11:30ರವರೆಗೆ ನಿರಂತರವಾಗಿ ಚಂದ್ರು ಫೋನ್ಗೆ ಒಂದೇ ನಂಬರ್ ನಿಂದ ಪದೇ ಪದೇ ಕರೆ, ಮೆಸೇಜ್ ಬಂದಿದೆ ಅಂತ ತಿಳಿದು ಬಂದಿದೆ. ಹಾಗಾಗಿ ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸ್ತಿದ್ದಾರೆ.
ಸಹೋದರನ ಪುತ್ರ ಚಂದ್ರಶೇಖರ್ ನಿಗೂಢ ಸಾವಿನಿಂದ ಭಾವುಕರಾಗಿದ್ದ ಮಾಜಿ ಸಚಿವ ರೇಣುಕಾಚಾರ್ಯ (MP Renukacharya) ಇದೀಗ ಪೊಲೀಸರ ಮೇಲೆ ಅನುಮಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರು ಕಾರು ಅಪಘಾತ ಆಗಿರೋದು ನಿಜ: FSL ತಜ್ಞ
ಓವರ್ ಸ್ಪೀಡ್ನಿಂದ ಚಂದ್ರು ನಾಲೆಗೆ ಬಿದ್ದಿದ್ದಾನೆ ಅಂತ ಪೊಲೀಸರು ಹೇಳ್ತಿದ್ದಾರೆ. ಹಾಗಾದರೆ ಚಂದ್ರು ಕೈಗೆ ಹಗ್ಗ ಕಟ್ಟಿದ್ಯಾರು..? ಪೊಲೀಸರ ನಿರ್ಲಕ್ಷ್ಯ ಕಾಣ್ತಿದೆ. ಒಬ್ಬ ಶಾಸಕ ಮಗನಿಗೆ ಈ ರೀತಿಯಾದ್ರೆ ಸಾಮಾನ್ಯ ಜನರ ಗತಿ ಏನು..? ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ವೈಫಲ್ಯ ಕಾಣಿಸುತ್ತಿದೆ ಅಂತ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ವಿರುದ್ಧ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಚಂದ್ರು ಕಾರು ಬಿದ್ದಿದ್ದ ನ್ಯಾಮತಿ-ಹೊನ್ನಾಳಿ ಮಾರ್ಗದ ನಾಲೆ ಬಳಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಫೋನ್ ಲೊಕೇಷನ್ ಹೇಳಿದ್ದೇ ಬೇರೆ, ಕಾರು ಸಿಕ್ಕಿದ್ದೇ ಬೇರೆ ಕಡೆ ಅಂತ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಬಳಿಕ ಹೊನ್ನಾಳಿ ಪೊಲೀಸ್ ಠಾಣೆ ಹಿಂಭಾಗ ಇರಿಸಲಾಗಿರುವ ಕಾರ್ ನೋಡಲು ಯತ್ನಿಸಿದರು. ತನಿಖೆ ಹಂತದಲ್ಲಿರೋ ಕಾರಣ ಟಾರ್ಪಲ್ ತೆರೆದು ತೋರಿಸಲು ನಿರಾಕರಿಸಿದ ಸಿಪಿಐ ಸಿದ್ದೇಗೌಡ ಮೇಲೆ ರೇಗಾಡಿದರು.
ನನ್ನ ಮಗ ಚಂದ್ರುವಿನ ದುರ್ಘಟನೆ ನೆಡೆದ ಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭ.#Honnali pic.twitter.com/rcCUX6Trfj
— M P Renukacharya (@MPRBJP) November 5, 2022
ನಿಮ್ಮ ಅಲೋಕ್ ಕುಮಾರ್ ನಿನ್ನೇ ಬಂದು ನನ್ನನ್ನು ಮಾತನಾಡಿಸದೇ ಹಾಗೇ ಹೋಗಿದ್ದಾನೆ. ನನ್ನ ಸ್ಟೇಟ್ಮೆಂಟ್ ಏನಾದ್ರು ತಗೊಂಡ್ರಾ..? ಓವರ್ ಸ್ಪೀಡ್ ಅಂತ ಹೇಳಿದಾನೆ. ಅದು ಹೆಂಗೆ ಹೇಳಿದ ಅಂಥ ಕೂಗಾಡಿದ್ದಾರೆ. ಈ ಮಧ್ಯೆ, ರೇಣುಕಾಚಾರ್ಯ ಮನೆಗೆ ಕ್ಷೇತ್ರದ ಕೆಲ ಮಹಿಳೆಯರು ಭೇಟಿ ನೀಡಿ ಕೈತುತ್ತು ತಿನ್ನಿಸಿ ಸಮಾಧಾನ ಮಾಡಿದ್ದಾರೆ.