Connect with us

Cricket

2021 ಐಪಿಎಲ್ ಆಟಗಾರರ ಹರಾಜಿಗೆ ದಿನ ನಿಗದಿಪಡಿಸಿದ ಬಿಸಿಸಿಐ

Published

on

ಮುಂಬೈ: 2021ರಲ್ಲಿ ನಡೆಯುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‍ನ ಆಟಗಾರರ ಹರಾಜು ಫೆ.18 ರಂದು ನಡೆಯಲಿದೆ.

ಕಳೆದ ಬಾರಿಯ ಐಪಿಎಲ್ ಕೊರೊನಾದಿಂದಾಗಿ ಯುಎಇನಲ್ಲಿ ನಡೆದಿತ್ತು. ಆದರೆ 14ನೇ ಆವೃತ್ತಿಯ ಐಪಿಎಲ್ ಭಾರತದಲ್ಲೇ ನಡೆಯಲಿದ್ದು ಅದಕ್ಕಾಗಿ ಎಲ್ಲಾ ತಂಡಗಳು ಆಟಗಾರರ ಉಳಿಸಿಕೊಳ್ಳುವ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈಗ ಕೈ ಬಿಟ್ಟ ಆಟಗಾರರ ಮರು ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿದೆ.

ಟ್ವಿಟ್ಟರ್ ನಲ್ಲಿ ಈ ಬಗ್ಗೆ ತಿಳಿಸಿರುವ ಐಪಿಎಲ್, ಗಮನಿಸಿ 2021ರ ಐಪಿಎಲ್ ಹರಾಜು ಫೆಬ್ರವರಿ 18 ರಂದು ನಡೆಯಲಿದ್ದು, ಚೆನ್ನೈನಲ್ಲಿ ನಡೆಯಲಿರುವ ಈ ಕಾರ್ಯಕ್ರಕ್ಕೆ ಕ್ರಿಕೆಟ್ ಪ್ರೀಯರು ಅಣಿಯಾಗಿ ಎಂದು ಟ್ವೀಟ್ ಮಾಡಿದೆ.

ಕಳೆದ ಬಾರಿಯ ಐಪಿಎಲ್‍ನಲ್ಲಿ ಕೋಟಿ ಕೊಟ್ಟು ಖರೀದಿಸಿದ್ದ ಫ್ರ್ಯಾಂಚೈಸ್‍ಗಳಿಗೆ ಕೆಲ ಆಟಗಾರರು ನಿರೀಕ್ಷಿತ ಮಟ್ಟದಲ್ಲಿ ತಮ್ಮ ಸಾಮಥ್ರ್ಯ ತೋರದೆ ನಿರಾಸೆ ಮೂಡಿಸಿದ್ದರು. ಹೀಗಾಗಿ ಈ ಬಾರಿಯ ಐಪಿಎಲ್‍ಗಾಗಿ ಈಗಾಗಲೇ ಘಟಾನುಘಟಿ ಅಟಗಾರರನ್ನು ರಿಲೀಸ್ ಮಾಡಲಾಗಿದೆ.

ಯಾವ ತಂಡದಿಂದ ಯಾರು ಔಟ್‌?
ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು: ಕ್ರಿಸ್ ಮೋರಿಸ್, ಆರನ್ ಫಿಂಚ್, ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದುಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್

ಡೆಲ್ಲಿ ಕ್ಯಾಪಿಟಲ್ಸ್‌: ಕೀಮೋ ಪಾಲ್, ಸಂದೀಪ್ ಲಮಿಚಾನೆ, ಅಲೆಕ್ಸ್ ಕ್ಯಾರಿ, ಜೇಸನ್ ರಾಯ್, ಮೋಹಿತ್ ಶರ್ಮಾ, ತುಷಾರ್ ದೇಶ್‌ಪಾಂಡೆ

ಕಿಂಗ್ಸ್‌ ಇಲೆವನ್‌ ಪಂಜಾಬ್‌: ಗ್ಲೆನ್ ಮ್ಯಾಕ್ಸ್‌ವೆಲ್, ಕರುಣ್ ನಾಯರ್, ಹರ್ದಸ್ ವಿಲ್ಜೋಯೆನ್, ಜಗದೀಶ್‌ ಸುಚಿತ್, ಮುಜೀಬ್ ಉರ್ ರಹಮಾನ್, ಶೆಲ್ಡನ್ ಕಾಟ್ರೆಲ್, ಜಿಮ್ಮಿ ನೀಶಮ್, ಕೆ. ಗೌತಮ್, ತಜಿಂದರ್ ಸಿಂಗ್.

ಸನ್‌ ರೈಸರ್ಸ್‌ ಹೈದರಾಬಾದ್‌: ಸಂಜಯ್ ಯಾದವ್, ಬಿ ಸಂದೀಪ್, ಬಿಲ್ಲಿ ಸ್ಟ್ಯಾನ್ಲೇಕ್, ಫ್ಯಾಬಿಯನ್ ಅಲೆನ್, ಯರ್ರಾ ಪೃಥ್ವಿರಾಜ್

ಚೆನ್ನೈ ಸೂಪರ್‌ ಕಿಂಗ್ಸ್‌: ಹರ್ಭಜನ್‌ ಸಿಂಗ್‌, ಮುರಳಿ ವಿಜಯ್‌, ಕೇದಾರ್‌ ಜಾಧವ್‌, ಪಿಯೂಶ್‌ ಚಾವ್ಲಾ, ಶೇನ್‌ ವಾಟ್ಸನ್‌, ಮೋನು ಸಿಂಗ್‌

ರಾಜಸ್ಥಾನ ರಾಯಲ್ಸ್‌: ಸ್ವೀವ್‌ ಸ್ಮಿತ್‌, ಅಂಕಿತ್‌ ರಜಪೂತ್‌, ಒಶಾನೆ ಥಾಮಸ್‌, ಆಕಾಶ್‌ ಸಿಂಗ್‌, ವರುಣ್‌ ಅರುಣ್‌, ಟಾಮ್‌ ಕರ್ರನ್‌, ಅನಿರುದ್ಧ ಜೋಶಿ, ಶಶಾಂಕ್‌ ಸಿಂಗ್‌

ಕೋಲ್ಕತ್ತಾ ನೈಟ್‌ ರೈಡರ್ಸ್‌: ಎಂ ಸಿದ್ಧಿಕಿ, ನಿಖಿಲ್‌ ನಾಯ್ಕ್‌, ಸಿದ್ದೇಶ್‌ ಲಾಡ್‌, ಕ್ರೀಸ್‌ ಗ್ರೀನ್‌, ಟಾಮ್‌ ಬಾಂಟನ್‌

ಮುಂಬೈ ಇಂಡಿಯನ್ಸ್‌: ಲಸಿತ್ ಮಾಲಿಂಗ, ಮಿಚ್ ಮೆಕ್‌ಕ್ಲೆನಾಘನ್, ಜೇಮ್ಸ್ ಪ್ಯಾಟಿನ್ಸನ್, ನಾಥನ್ ಕೌಲ್ಟರ್-ನೈಲ್, ಶೆರ್ಫೇನ್ ರುದರ್‌ಫೋರ್ಡ್, ಪ್ರಿನ್ಸ್ ಬಲ್ವಂತ್ ರೇ, ದಿಗ್ವಿಜಯ್‌ ದೇಶ್‌ಮುಖ್‌.

Click to comment

Leave a Reply

Your email address will not be published. Required fields are marked *