Connect with us

Districts

ಆರೋಪ ಮಾಡೋದು ಬಿಟ್ರೆ ಕಾಂಗ್ರೆಸ್‍ಗೆ ಬೇರೆ ಗೊತ್ತಿಲ್ಲ: ಬಿ.ಸಿ.ಪಾಟೀಲ್

Published

on

Share this

ಹಾವೇರಿ: ಕೊರೊನಾ ಮೂರನೇ ಅಲೆ ಬರೋ ಸಾಧ್ಯತೆ ಇದೆ. ರಾಜಕಾರಣ ಮಾಡೋ ಸಮಯ ಇದಲ್ಲ. ರಾಜಕಾರಣಕ್ಕೆ ಪ್ರತ್ಯೇಕ ಸಮಯ ಮೀಸಲಿಡೋಣ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಹಾವೇರಿ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ವಿರೋಧಿ, ಅನುಪಯುಕ್ತ ಹೇಳಿಕೆ ನೀಡಿದರೆ ಕಠಿಣ ಕ್ರಮ ಕೈಗೊಳ್ಳೋದಾಗಿ ಅರುಣ್ ಸಿಂಗ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: WTCಫೈನಲ್ ಭಾರತ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸಿಎಂ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥರ ಆರೋಪಗಳು ಆಧಾರದ ರಹಿತ ಆರೋಪಗಳಾಗಿವೆ. ಇದೊಂದು ಬೇಸ್ ಲೆಸ್ ಹೇಳಿಕೆಯಾಗಿದೆ. ಆರೋಪ ಮಾಡೋರಿಗೆ ಬೇರೆ ಕೆಲಸವಿಲ್ಲ, ಆರೋಪ ಮಾಡ್ತಿದ್ದಾರೆ. ಶ್ರೀರಾಮನ ದೇವಸ್ಥಾನ ಕಟ್ಟಬೇಕು ಎಂಬುದು ಬಿಜೆಪಿಯವರ ಅಜೆಂಡಾದಲ್ಲಿದೆ. ರಾಮ ಮಂದಿರದ ಹಣವನ್ನ ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ. ಪಿಎಂ ಕೇರ್ಸ್ ಲೆಕ್ಕವನ್ನ ಜನರು ಕೇಳಿದರೆ ನೀಡುತ್ತೇವೆ.  ಕಾಂಗ್ರೆಸ್​ನವರಿಗೆ ಇದರ ಲೆಕ್ಕ ಕೊಡೋ ಅಗತ್ಯವಿಲ್ಲ.  ಆರೋಪ ಮಾಡೋದು ಬಿಟ್ರೆ ಬೇರೇನೂ ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement