Districts
ಯತ್ನಾಳ್ಗೆ ತಾಕತ್ತಿದ್ರೆ ಕೊಡಗಿಗೆ ಬರಲಿ: ಕರವೇ ಕಾರ್ಯಕರ್ತರು

ಮಡಿಕೇರಿ : ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದನ್ನ ವಿರೋಧಿಸಿ ಕನ್ನಡಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ ಭಾಗವಾಗಿ ಕೊಡಗಿನ ಗಡಿಭಾಗ ಕುಶಾಲನಗರದಲ್ಲಿ ರಕ್ಷಣಾ ವೇದಿಕೆ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು.
ಕುಶಾಲನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿದ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ನೂರಾರು ಕಾರ್ಯಕರ್ತರು ಬಳಿಕ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಎಂಇಎಸ್ ಅನ್ನು ಮೆಚ್ಚಿಸಲು ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಕನ್ನಡಿಗರಿಗೆ ಮಾಡುವ ಮೋಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಇಲ್ಲಿಗೆ ನಿಲ್ಲಿಸಲ್ಲ, ಬುಧವಾರ ಮತ್ತೆ ಸಭೆ ಮಾಡ್ತೇವೆ: ವಾಟಾಳ್ ಗುಡುಗು https://t.co/j5LrsUiGZL#Bengaluru #KarnatakaBandh #VatalNagaraj #KannadaNews
— PublicTV (@publictvnews) December 5, 2020
ಕನ್ನಡ ಪರ ಸಂಘಟನೆಗಳ ಬಗ್ಗೆ ಕೀಳಾಗಿ ಮಾತನಾಡುವ ಶಾಸಕ ತನ್ನ ಯೋಗ್ಯತೆ ಏನು ಎಂದು ಮೊದಲು ತಿಳಿದುಕೊಳ್ಳಲಿ. ಜೈಲಿಗೆ ಹೋಗಿ ಬಂದಿರುವವರೆಲ್ಲಾ ಕನ್ನಡ ಪರ ಸಂಘಟನೆಗಳ ಬಗ್ಗೆ ಮಾತನಾಡುತ್ತಾರೆ. ಅವರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಕಪಿಯ ರೀತಿ ಹಾರುವುದು ಗೊತ್ತಿದೆ. ತಾಕ್ಕತ್ತಿದ್ದರೆ, ಆ ಶಾಸಕ ಕೊಡಗಿಗೆ ಬರಲಿ. ಸಂಬಾಜಿ ಪಾಟೀಲ್ ಗೆ ಮಸಿ ಬಳಿದ ಕೆಲಸವನ್ನು ಮಾಡಿ ತೋರಿಸುತ್ತೇವೆ ಎಂದು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
