Saturday, 18th January 2020

Recent News

ದೀರ್ಘ ಪ್ರಯಾಣದ ಬಳಿಕ ಪ್ರಜಾಪ್ರಭುತ್ವದ ಪವಿತ್ರ ದೇವಸ್ಥಾನಕ್ಕೆ ಪ್ರವೇಶ – ಸುಮಲತಾ

ಬೆಂಗಳೂರು: ಮಂಡ್ಯ ಲೋಕಸಭಾ ಅಖಾಡದಲ್ಲಿ ಗೆದ್ದು ಇಂದು ಮೊದಲ ಬಾರಿಗೆ ಸಂಸತ್ ಭವನ ಪ್ರವೇಶಿಸಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭವನದ ಮುಂದೆ ನಿಂತು ಫೋಟೋ ತೆಗೆದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಂಸತ್ ಭವನದ ಮುಂದೆ ನಿಂತಿರುವ ಫೋಟೋವನ್ನು ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಮೂಲಕ ಮಂಡ್ಯದಿಂದ ಸಂಸತ್ ಪ್ರವೇಶಿಸಿದ ಮೊದಲ ಪಕ್ಷೇತರ ಮಹಿಳಾ ಅಭ್ಯರ್ಥಿಯಾಗಿದ್ದಾರೆ.

ಸಂಸತ್ ಭವನದ ಎದುರು ನಿಂತಿರುವ ಫೋಟೋ ಹಾಕಿರುವ ಸುಮಲತಾ ಅವರು, ದೀರ್ಘ ಪ್ರಯಾಣದ ಬಳಿಕ ಪ್ರಜಾಪ್ರಭುತ್ವದ ಪವಿತ್ರ ದೇವಸ್ಥಾನಕ್ಕೆ ಪ್ರವೇಶ, ಜೈ ಹಿಂದ್ ಜೈ ಕರ್ನಾಟಕ ಎಂದು ಬರೆದು ಕೊನೆಯಲ್ಲಿ ನನಗೆ ಗೌರವ ಮತ್ತು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

The long journey..to the sacred temple of democracyJai Hind Jai Karnataka 🙏🏼😍🙏🏼An honor and a privilege ..#17thLoksabha #MP #Mandya #Karnataka

Posted by Sumalatha Amarnath on Thursday, 6 June 2019

ಸುಮಲತಾ ಅವರ ಈ ಸಂದೇಶಕ್ಕೆ ಅಭಿಮಾನಿಗಳು, ಸಿನಿಮಾ ನಟರು ಕೂಡ ಸಂತಸ ವ್ಯಕ್ತಪಡಿಸಿದ್ದು ಫೇಸ್ ಬುಕ್ ಮೂಲಕವೇ ಶುಭಾಶಯಗಳನ್ನು ಕೋರಿದ್ದಾರೆ.

Leave a Reply

Your email address will not be published. Required fields are marked *