Tuesday, 16th July 2019

ಹೊಸ ಪ್ರೇಯಸಿಯನ್ನು ಮದುವೆಯಾಗಲು ಹಳೇ ಪ್ರೇಯಸಿ ಹುಡುಕಿಕೊಂಡ ಬಂದ ಅಸಾಮಿ ಪೊಲೀಸರ ವಶಕ್ಕೆ

ಬೆಂಗಳೂರು: ಹೊಸ ಪ್ರೇಯಸಿಯನ್ನು ಮದುವೆಯಾಗಲು ಹಳೇ ಪ್ರೇಯಸಿಯನ್ನು ಹುಡುಕಿಕೊಂಡು ಬಂದ ಶಂಕಿತ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏಪ್ರಿಲ್ 29 ರಂದು ಉಕ್ರೇನ್ ನಿಂದ ಕತಾರ್ ಏರ್‍ವೇಸ್ ನಲ್ಲಿ ಬೆಂಗಳೂರಿಗೆ ಬಂದಿದ್ದ ಜೋಯೆಲ್ ನಿರುಶನ್ ಸ್ಯಾಮ್ಯುಯೆಲ್ ಎಂಬ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ವಲಸೆ ಆಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ವೇಳೆಯಲ್ಲಿ ಅವನ ಬಳಿ 2 ಪಾಸ್‍ಪೋರ್ಟ್‍ಗಳು ಸಿಕ್ಕಿದ್ದವು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಅವನನ್ನು ವಿಚಾರಣೆ ಮಾಡಿದಾಗ ಸ್ಫೋಟಕ ವಿಚಾರ ಹೊರಬಿದ್ದಿದೆ.

ವಿಚಾರಣೆ ವೇಳೆ, ನಾನು ಶ್ರೀಲಂಕಾ ನಿವಾಸಿಯಾಗಿದ್ದು, ನನ್ನ ಹೆಸರು ಇರಿಸಹಾ ಟ್ರಿನಿಟಿ ಪಿರೇರಾ. ಹಳೆಯ ಪ್ರೇಯಸಿ ಬೆಂಗಳೂರಿನಲ್ಲಿ ನೆಲೆಸಿದ್ದು ಅವಳನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ. ಇರಿಸಹಾ ಟ್ರಿನಿಟಿ ಪೆರೆರಾಗೆ 35 ವರ್ಷವಾದರೂ ಮದುವೆ ಆಗಿರಲಿಲ್ಲ. ಶ್ರೀಲಂಕಾದಲ್ಲಿ ತನ್ನ ಹೊಸ ಪ್ರೇಯಸಿ ಜೊತೆ ಮದುವೆಯಾಗಲು ಸಿದ್ದತೆ ನಡೆಸಿದ್ದ. ಅದರೆ ಮದುವೆಯಾಗಲು ಚರ್ಚ್‍ವೊಂದಕ್ಕೆ ತನ್ನ ಹಳೆಯ ಪ್ರೇಯಸಿಯಿಂದ ‘ಅವಿವಾಹಿತ ಪತ್ರ’ ಬೇಕಿತ್ತು. ಈ ಪತ್ರ ಪಡೆಯಲು ಹಳೆಯ ಪ್ರೇಯಸಿಯನ್ನು ಹುಡುಕಿಕೊಂಡು ಬಂದಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.

ಮೂರು ದಿನಗಳ ಕಾಲ ವಿವಿಧ ತನಿಖಾ ಸಂಸ್ಥೆಗಳು ಆತನನ್ನು ವಿಚಾರಣೆ ನಡೆಸಿತ್ತು. ಈ ವ್ಯಕ್ತಿ ತನ್ನ ಪ್ರೇಯಸಿಯನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾನೆ ಎಂದು ಖಚಿತವಾದ ನಂತರ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದ್ದು, ಸದ್ಯ ಬಿಐಎಎಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *