Tuesday, 15th October 2019

Recent News

10 ರೂಪಾಯಿಗಾಗಿ 25 ವರ್ಷದ ಯುವಕನ ಬರ್ಬರ ಹತ್ಯೆ

ಬೆಂಗಳೂರು: ಕೇವಲ 10 ರೂಪಾಯಿಗಾಗಿ 25 ವರ್ಷದ ಯುವಕನನ್ನು ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಭಾರತಿನಗರದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಆಸ್ಟಿನ್ ಟೌನ್ ನಿವಾಸಿ ಭರಣಿಧರ್ (25) ಎಂದು ಗುರುತಿಸಲಾಗಿದ್ದು. ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಸೆಲ್ವರಾಜ್ ಅಂಡ್ ಟೀಂ ಈ ಕೃತ್ಯ ಎಸಗಿದೆ.

ಕೊಲೆಯಾದ ಭರಣಿಧರ್ ಭಾರತಿನಗರದ ಲಾವಣ್ಯ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬೈಕಿನಲ್ಲಿ ಬಂದಿದ್ದಾನೆ. ಈ ವೇಳೆ ಪಾರ್ಕಿಂಗ್ ಉಸ್ತುವಾರಿ ಸೆಲ್ವರಾಜ್ ಮತ್ತು ಅವನ ಸಹಚರರು 20 ರೂ. ಪಾರ್ಕಿಂಗ್ ಶುಲ್ಕ ಕಟ್ಟುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪದ ಭರಣಿಧರ್ 10 ರೂ. ಕೊಡುವುದಾಗಿ ಹೇಳಿದ್ದಾನೆ. ಈ ವಿಚಾರಕ್ಕೆ ಕೋಪಗೊಂಡ ಸೆಲ್ವರಾಜ್ ಅಂಡ್ ಟೀಂ ಅವನನ್ನು ಕೊಲೆ ಮಾಡಿದೆ.

ಈ ಸಂಬಂಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *