Saturday, 7th December 2019

Recent News

ಅಭಿಮಾನಿಯಿಂದ ಕಿಸ್ – ಈಶ್ವರಪ್ಪ ಫುಲ್ ಖುಷ್

ಬೆಂಗಳೂರು: ಶಾಸಕರ ರಾಜೀನಾಮೆ ಪರ್ವದಿಂದ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಮಡಾ ರೆಸಾರ್ಟ್‍ನಲ್ಲಿ ತಂಗಿರುವ ಬಿಜೆಪಿ ಶಾಸಕರನ್ನು ನೋಡಲು ಬಂದಿದ್ದ ಅಭಿಮಾನಿಯೊಬ್ಬ ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪನವರಿಗೆ ಕಿಸ್ ಕೊಟ್ಟಿದ್ದಾನೆ.

ಇಂದು ತಮ್ಮ ನೆಚ್ಚಿನ ನಾಯಕರನ್ನು ಭೇಟಿ ಮಾಡಲು ರೆಸಾರ್ಟ್ ಬಳಿ ಅಭಿಮಾನಿಗಳು ಬೀಡು ಬಿಟ್ಟಿದ್ದರು. ರೆಸಾರ್ಟ್ ಬಳಿ ತಮ್ಮ ನೆಚ್ಚಿನ ನಾಯಕರ ಸೆಲ್ಫಿಗಾಗಿ ಕಾರ್ಯಕರ್ತರು ಮುಗಿಬಿಳುತ್ತಿದ್ದರು. ಇದನ್ನು ಗಮನಿಸಿದ ಈಶ್ವರಪ್ಪ ಮತ್ತು ರಾಮದಾಸ್ ರೆಸಾರ್ಟ್ ನಿಂದ ಹೊರಬಂದು ಅಭಿಮಾನಿಗಳನ್ನು ಭೇಟಿ ಮಾಡಿದರು.

ಈ ವೇಳೆ ಅಭಿಮಾನಿಗಳಿಗೋಸ್ಕರ ನಾಯಕರು ಅವರ ಜೊತೆ ಬಳಿ ಸೆಲ್ಫಿ ತೆಗೆದುಕೊಂಡರು. ಈ ಸಮಯದಲ್ಲಿ ಅಭಿಮಾನಿಯೊಬ್ಬ ಈಶ್ವರಪ್ಪ ಅವರ ಕೆನ್ನೆ ಮುಟ್ಟಿ ಮುತ್ತು ಕೊಟ್ಟಿದ್ದಾನೆ. ಅಭಿಮಾನಿ ಮುತ್ತು ಕೊಟ್ಟಿದ್ದಕ್ಕೆ ಈಶ್ವರಪ್ಪ ಫುಲ್ ಖುಷ್ ಆಗಿದ್ದಾರೆ.

ಇದೇ ವೇಳೆ ಸುರುಪುರ ಮತ್ತು ಬದಾಮಿ ಕ್ಷೇತ್ರದಿಂದ ನೆಚ್ಚಿನ ಶಾಸಕರನ್ನು ಭೇಟಿಯಾಗಲು ಬಂದಿದ್ದ ಕಾರ್ಯಕರ್ತರನ್ನು ಮಾತನಾಡಿಸಿದ ಕೆ.ಎಸ್.ಈಶ್ವರಪ್ಪ, ಬದಾಮಿಯಿಂದ ಬಂದಿದ್ದೀರಾ? ಸಿದ್ದರಾಮಯ್ಯ ಅವರನ್ನು ಈ ಬಾರಿ ಸೋಲಿಸೋಕೆ ಬಂದಿದ್ದಿರಾ ಎಂದು ಹೇಳಿ ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *