Wednesday, 16th October 2019

Recent News

ಗ್ರಾಹಕರ ಸೋಗಿನಲ್ಲಿ 3 ಲಕ್ಷ ರೂಪಾಯಿ ಮೌಲ್ಯದ ಸೀರೆ ಕದ್ದೊಯ್ದ ದಂಪತಿ: ವಿಡಿಯೋ ನೋಡಿ

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದ ದಂಪತಿಯು ದುಬಾರಿ ಬೆಲೆಯ ಸೀರೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಗರದ ವಿದ್ಯಾರಣ್ಯಪುರದ ಅಂಗಡಿಯಲ್ಲಿ ನಡೆದಿದೆ.

ವಿದ್ಯಾರಣ್ಯಪುರದ ನಂಜಪ್ಪ ಸರ್ಕಲ್ ಬಳಿಯ ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ದಂಪತಿ ಕಳ್ಳತನ ಎಸಗಿದ್ದಾರೆ. ಭಾನುವಾರ ಮಧ್ಯಾಹ್ನ 2 ಗಂಟೆಗೆ ಅಂಗಡಿಗೆ ಬಂದ ದಂಪತಿಯು, ಸೀರೆ ಖರೀದಿಸುವ ನೆಪದಲ್ಲಿ ಸಿಬ್ಬಂದಿಯ ಗಮನ ಬೆರೆಡೆ ಸೆಳೆದು, ಒಟ್ಟು 3 ಲಕ್ಷ ರೂ.ಮೌಲ್ಯದ ಬೆಲೆಬಾಳುವ 20 ಸೀರೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಅಂಗಡಿಯಲ್ಲಿ ಏಕಾಏಕಿ ದುಬಾರಿ ಬೆಲೆಯ ಸೀರೆಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಿಬ್ಬಂದಿ ಸಿಸಿ ಟಿವಿ ಪರೀಕ್ಷಿಸಿದ್ದಾರೆ. ಈ ವೇಳೆ ಕಳ್ಳ ದಂಪತಿಯ ಕೈ ಚಳಕ ಸಿಸಿ ಟಿವಿಯಲ್ಲಿ ಕಂಡುಬಂದಿದ್ದು, ವಿಷಯ ತಿಳಿದ ಕೂಡಲೇ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.

ದಂಪತಿಯು ಅಂಗಡಿಗೆ ಆಂಧ್ರಪ್ರದೇಶದ ನೋಂದಣಿಯ ಬೈಕಿನಲ್ಲಿ ಬಂದಿದ್ದು ತಿಳಿದು ಬಂದಿದ್ದು, ಘಟನೆ ಸಂಬಂಧ ವಿದ್ಯಾರಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *