Connect with us

Bellary

ಪ್ರತಿಷ್ಠಿತ ಹೋಟೆಲಿನಲ್ಲಿ ಮಾಜಿ ಶಾಸಕನ ಸಂಬಂಧಿ ನಿಗೂಢ ಸಾವು

Published

on

– ಅರೆನಗ್ನ ಸ್ಥಿತಿಯಲ್ಲಿ ಶವ ಪತ್ತೆ
– ಸಿಸಿಟಿವಿ ದೃಶ್ಯದಲ್ಲೇನಿದೆ..?

ಬಳ್ಳಾರಿ: ಸಿಂಧನೂರು ಮಾಜಿ ಶಾಸಕ ಬಾದರ್ಲಿ ಹಂಪನಗೌಡರ ಸಂಬಂಧಿಕನೋರ್ವ ಪ್ರತಿಷ್ಠಿತ ಖಾಸಗಿ ಹೋಟೆಲೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ನಗರದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಜವಳಗೇರಿ ರುದ್ರಗೌಡ ಎಂದು ಗುರುತಿಸಲಾಗಿದ್ದು,ಸಿಂಧನೂರು ಮಾಜಿ ಶಾಸಕ ಬಾದರ್ಲಿ ಹಂಪನಗೌಡರ ಸಂಬಂಧಿಕ. ಇವರಿಗೆ 73 ರಿಂದ 75 ವರ್ಷವಿರಬಹುದು ಎಂದು ಅಂದಾಜಿಸಲಾಗಿದೆ. ವೈಷ್ಣವಿ ಗ್ರ್ಯಾಂಡ್ ಹೋಟೆಲ್ ಕೊಠಡಿ ಸಂಖ್ಯೆ 201ರಲ್ಲಿ ಮೃತಪಟ್ಟಿದ್ದಾರೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನ್ನಲಾಗ್ತಿದೆ. ಮೃತದೇಹವು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮಾಜಿ ಶಾಸಕ ಬಾದರ್ಲಿ ಹಂಪನಗೌಡ ಹಾಗೂ ಕುಟುಂಬಸ್ಥರು ಬಂದಿದ್ದಾರೆ. ಘಟನಾ ಸ್ಥಳಕ್ಕೆ ಬಂದಿರುವ ಪೊಲೀಸರು ಮೃತದೇಹ ಹಾಗೂ ಹೋಟೆಲ್ ಸಿಸಿಟಿವಿ ಫೂಟೇಜ್‍ಗಳನ್ನು ಪರಿಶೀಲಿಸಿದ್ದಾರೆ.

ಮುಖಕ್ಕೆ ಮಾಸ್ಕ್ ಹಾಕಿದ್ದ ಮಹಿಳೆಯೊಬ್ಬಳು ರುದ್ರಗೌಡ ತಂಗಿದ್ದ ಕೋಣೆಗೆ ತೆರಳಿ ವಾಪಸ್ಸಾಗಿರುವ ದೃಶ್ಯ ಸೆರೆಯಾಗಿದೆ ಎಂದು ಹೇಳಲಾಗ್ತಿದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಬಾದರ್ಲಿ ಹಂಪನಗೌಡ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಸಿರಗುಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *