Connect with us

Bengaluru Rural

ಬಕ್ರೀದ್ ಹಬ್ಬ -ಸಮುದಾಯದ ಮುಖಂಡರ ಜೊತೆಗೆ ಪೊಲೀಸರ ಶಾಂತಿ ಸಭೆ

Published

on

Share this

ನೆಲಮಂಗಲ: ಬಕ್ರೀದ್ ಹಬ್ಬದ ಹಿನ್ನೆಲೆ ಸಮುದಾಯದ ಮುಖಂಡರ ಜೊತೆಗೆ ನೆಲಮಂಗಲ ಪೊಲೀಸರ ಶಾಂತಿ ಸಭೆ ನಡೆಸಿದ್ದಾರೆ.

ಕೊರೊನಾ ಸೋಂಕಿನ ಆತಂಕದ ನಡುವೆ ಪವಿತ್ರವಾದ ಬಕ್ರೀದ್ ಹಬ್ಬ ಆಚರಣೆ ಸರ್ಕಾರ ಹೀಗಾಗಲೇ ಸಾಕಷ್ಟು ನಿಯಮಗಳನ್ನ ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಹೊರವಲಯ ನೆಲಮಂಗಲ ಉಪ ವಿಭಾಗದ ಎರಡು ಸಮುದಾಯದ ಮುಖಂಡರ ಸಭೆಯನ್ನ ನೆಲಮಂಗಲ ಡಿವೈಎಸ್ ಪಿ ಜಗದೀಶ್ ನೇತೃತ್ವದಲ್ಲಿ ನಡೆಸಲಾಗಿದೆ.

ನಗರದ ಖಾಸಗಿ ಸಮುದಾಯ ಭವನದಲ್ಲಿ ಈ ಸಭೆಯನ್ನ ನಡೆಸಿದ್ದು, ನೂರಾರು ಮುಖಂಡರು ಭಾಗವಹಿಸಿದ್ದರು, ಈ ವೇಳೆ ಹಬ್ಬ ಆಚರಣೆ ವೇಳೆ ಸಾಮಾಜಿಕ ಅಂತರ, ಮಾಸ್ಕ್, ಗುಂಪು ಸೇರದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು. ಇದನ್ನೂ ಓದಿ: ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖ್ಯಾತ ನಟನ ಪುತ್ರಿ

ಪವಿತ್ರ ಬಕ್ರೀದ್ ಹಬ್ಬದಲ್ಲಿ ದಾನ ಧರ್ಮ ಮಾಡುವಾಗ ಎಚ್ಚರಿಕೆ ವಹಿಸಿ ಹಾಗೂ ಕೊರೊನಾ ನಿಯಮಗಳನ್ನ ಪಾಲಿಸಿ ಎಂದು ನೆಲಮಂಗಲ ಉಪ ವಿಭಾಗದ ಡಿವೈಎಸ್ ಪಿ ಜಗದೀಶ್ ಹೇಳಿದರು. ಈ ವೇಳೆ ಸಿಪಿಐಗಳಾದ ಕುಮಾರ್, ಮಂಜುನಾಥ್, ಹರೀಶ್, ಅರುಣ್ ಕುಮಾರ್ ಸಾಲಂಕಿ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement