Connect with us

Bengaluru City

ಬಾಹುಬಲಿ ದಾಖಲೆ ಬ್ರೇಕ್ ಮಾಡಿದ ಕೆಜಿಎಫ್-2 -ಎಲ್ಲಾ ಸಿನಿಮಾಗಳ ದಾಖಲೆಗಳು ಉಡೀಸ್

Published

on

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಟೀಸರ್ ಅಬ್ಬರಕ್ಕೆ ಇದೀಗ ಎಲ್ಲರೂ ಗಪ್‍ಚುಪ್ ಆಗಿದ್ದಾರೆ. ಗುರುವಾರ ರಾತ್ರಿ ರಿಲೀಸ್ ಆದ ಕೆಜಿಎಫ್-2 ಸಿನಿಮಾದ ಟೀಸರ್ ಸದ್ಯ ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್ ನಂ.1 ಆಗಿದೆ. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವ ಕೆಜಿಎಫ್-2 ಟೀಸರ್ ಎಲ್ಲಾ ಸಿನಿ ಇಂಡಸ್ಟ್ರಿ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡಿದೆ. ಅಲ್ಲದೆ ಟಾಲಿವುಡ್‍ನಲ್ಲಿ ಅಬ್ಬರಿಸಿದ ನಟ ಡಾರ್ಲಿಂಗ್ ಪ್ರಭಾಸ್ ಬಾಹುಬಲಿ ಚಿತ್ರದ ರೆಕಾರ್ಡ್ ನನ್ನು ಕೆಜಿಎಫ್-2 ಬ್ರೇಕ್ ಮಾಡಿ ಯೂಟ್ಯೂಬ್‍ನಲ್ಲಿ ಮುನ್ನುಗ್ಗುತ್ತಿದೆ.

ಕೆಜಿಎಫ್-2 ಸುನಾಮಿಗೆ ಎಲ್ಲಾ ಇಂಡಸ್ಟ್ರಿಯವರು ಫುಲ್ ಸೈಲೆಂಟ್ ಆಗಿದ್ದಾರೆ. ಚಿತ್ರದ ಟೀಸರ್ ಹವಾ ಈಗ ಎಲ್ಲೆಡೆ ಜೋರಾಗಿ ಸದ್ದುಮಾಡುತ್ತಿದೆ. ಟೀಸರ್ ರಿಲೀಸ್ ಆದ 48 ಗಂಟೆಗಳಲ್ಲಿ 116 ಮಿಲಿಯನ್ ವಿವ್ಸ್ ಪಡೆದ ಕೆಜಿಎಫ್-2, ಈ ಹಿಂದೆ ಟಾಲಿವುಡ್ ನಟ ಪ್ರಭಾಸ್ ಅಭಿನಯದ ಬಾಹುಬಲಿ-2 ಸಿನಿಮಾದ ಟ್ರೇಲರ್ ರೆಕಾರ್ಡ್‍ನನ್ನು ಬ್ರೇಕ್ ಮಾಡುವುದರ ಮೂಲಕ ಕೆಜಿಎಫ್ ಹಿಂದಿಕ್ಕಿದೆ.

ಬಾಹುಬಲಿ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಪಟ್ಟ ಅಲಂಕರಿಸಿದ ನಟ ಡಾರ್ಲಿಂಗ್ ಪ್ರಭಾಸ್ ಅಭಿನಯಿಸಿದ್ದ ಬಾಹುಬಲಿ-2 ಚಿತ್ರದ ಟ್ರೇಲರ್ ಬಿಡುಗಡೆಯಾದಾಗ 116 ಮಿಲಿಯನ್ ವಿವ್ಸ್ ಪಡೆದಿತ್ತು. ಆದ್ರೆ ಕೆಜಿಎಫ್-2 ಟೀಸರ್ ಬಾಹುಬಲಿ ಸಿನಿಮಾಕ್ಕಿಂತ ಕಡಿಮೆ ಅವಧಿಯಲ್ಲಿ 116 ಮಿಲಿಯನ್ ವಿವ್ಸ್ ದಾಟಿ ಮುನ್ನುಗ್ಗುತ್ತಿದೆ. ಟೀಸರ್ ಹವಾ ನೋಡಿ ಪರಭಾಷ ಸಿನಿಪಂಡಿತರು ಶಾಕ್ ಆಗಿದ್ದಾರೆ.

ಅಲ್ಲದೆ ಚಿತ್ರಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್‍ಗೆ ಬೇರೆ ಭಾಷೆಯ ಕಲಾವಿದರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಮೇಕಿಂಗ್ ರಾಕಿಂಗ್ ಸ್ಟಾರ್ ಲುಕ್‍ಗೆ ಜನ ಫಿದಾ ಆಗಿದ್ದಾರೆ. ಬಿಗ್ ಸ್ಕ್ರೀನ್‍ನಲ್ಲಿ ರಾಕಿ ಭಾಯ್ ನೋಡಲು ಪ್ರೇಕ್ಷಕರು ಹಾತೊರೆಯುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *