Tuesday, 19th November 2019

Recent News

ಸರ್ಕಾರಿ ಆಸ್ಪತ್ರೆ ಬೆಡ್ ಮೇಲೆ ಮಲಗಿದ ಬೀದಿ ನಾಯಿ

ಬಾಗಲಕೋಟೆ: ರೋಗಿಗಳು ಮಲಗಬೇಕಾದ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿ ಹಾಯಾಗಿ ಮಲಗಿರುವ ಘಟನೆ ಜಿಲ್ಲೆಯ ರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಆಸ್ಪತ್ರೆ ಬೆಡ್ ಮೇಲೆ ಚರ್ಮ ರೋಗಕ್ಕೆ ಒಳಗಾದ ನಾಯಿ ಮಲಗಿದ್ದರೂ ಅಲ್ಲಿನ ಸಿಬ್ಬಂದಿ ಅದನ್ನು ಗಮನಿಸದೇ ಓಡಾಡುತ್ತಿದ್ದಾರೆ. ಅದ್ದರಿಂದ ಜನರು ಇದು ಸಾರ್ವಜನಿಕ ಆಸ್ಪತ್ರೆಯೋ ನಾಯಿ ಆಸ್ಪತ್ರೆಯೋ ಎಂದು ಕೇಳುವ ಪರಿಸ್ಥಿತಿ ಬಂದಿದೆ.

ಈ ವಿಚಾರದ ಬಗ್ಗೆ ಸ್ಥಳೀಯರು ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದರೆ, ನಾವು ನಾಯಿಯನ್ನು ಕಾಯುತ್ತಾ ಕುಳಿತುಕೊಳ್ಳಲು ಆಗುತ್ತಾ ಎಂದು ಬೇಜವಾಬ್ದಾರಿ ತೋರುತ್ತಿದ್ದಾರೆ. ಸಿಬ್ಬಂದಿಯ ಈ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *