Connect with us

Bagalkot

ಆಶಾ ಕಾರ್ಯಕರ್ತೆಯ ಎದೆ, ಹೊಟ್ಟೆಗೆ ಒದ್ದು ಹಲ್ಲೆಗೈದ ಪುಂಡ

Published

on

ಬಾಗಲಕೋಟೆ: ಪುಂಡನೊಬ್ಬ ಆಶಾ ಕಾರ್ಯಕರ್ತೆಯ ಎದೆ, ಹೊಟ್ಟೆಗೆ ಒದ್ದು ತಲೆಗೆ ಹೊಡೆದು ಹಲ್ಲೆಗೈದ ಘಟನೆ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಡೆದಿದೆ.

ಕುಳಲಿ ಗ್ರಾಮದ ಜ್ಯೋತಿ ಪೋಳ (23) ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ. ಅದೇ ಗ್ರಾಮದ ವಿಠ್ಠಲ ಗಸ್ತಿ ಹಲ್ಲೆಗೈದ ಆರೋಪಿ. ಇಂದು ಸಂಜೆ ನಡೆದ ಘಟನೆ ನಡೆದಿದ್ದು, ಸ್ಥಳದಿಂದ ಆರೋಪಿ ಪರಾರಿಯಾಗಿದ್ದ.

ಗ್ರಾಮಕ್ಕೆ ಮಹಾರಾಷ್ಟ್ರದಿಂದ ಜನರು ಬರುತ್ತಿದ್ದಾರೆ ಎಂಬ ಮಾಹಿತಿ ಆಶಾ ಕಾರ್ಯಕರ್ತೆ ಜ್ಯೋತಿ ಪೋಳ ಅವರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆ ಇಂದು ಸಂಜೆ ವಿಠ್ಠಲ ಗಸ್ತಿ ಮನೆಗೆ ಹೋಗಿ ಮಹಾರಾಷ್ಟ್ರದಿಂದ ನಿಮ್ಮ ಮನೆಗೆ ಬರುತ್ತಿರುವವರ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ. ಬೇರೆ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಮಾಹಿತಿ ನೀಡಲು ಒಪ್ಪದ ವಿಠ್ಠಲ ಗಸ್ತಿ ಕೋಪಗೊಂಡು ಜ್ಯೋತಿ ಅವರ ಎದೆ, ಒಟ್ಟೆಗೆ ಒದ್ದಿದ್ದಾನೆ. ಅಷ್ಟೇ ಅಲ್ಲದೆ ತಲೆಗೆ ಹೊಡೆದು ಹಲ್ಲೆಗೈದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಜ್ಯೋತಿ ಅವರನ್ನು ಮುಧೋಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಸಂಬಂಧ ಕುಳಲಿ ಗ್ರಾಮ ಪಂಚಾಯತಿ ಪಿಡಿಒ ಕವಿತಾ ಅವರು ವಿಠ್ಠಲ ವಿರುದ್ಧ ಮುಧೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗೆ ಬಲೆ ಬೀಸಿ ವಶಕ್ಕೆ ಪಡೆದಿದ್ದಾರೆ.