Connect with us

Districts

ಹೆಚ್‍ಡಿಡಿಗೆ 224 ಮೊಮ್ಮಕ್ಕಳು ಯಾಕಿಲ್ಲ?: ಚಿಂಚನಸೂರು

Published

on

ಕಲಬುರಗಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮಗೆ 224 ಮೊಮ್ಮಕ್ಕಳಿಲ್ಲ ಯಾಕೆ ಇಲ್ಲ? ಇದಿದ್ದರೆ ಎಲ್ಲರಿಗೂ ಸೀಟು ಕೊಡಿಸಬಹುದಿತ್ತು ಎಂಬ ಚಿಂತೆ ಅವರಿಗೆ ಕಾಡುತ್ತಿದೆ ಎಂದು ಕಲಬುರಗಿಯಲ್ಲಿ ನಡೆದ ಕೋಲಿ ಸಮಾಜ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ವ್ಯಂಗ್ಯವಾಡಿದ್ದಾರೆ.

ಸಭೆಯಲ್ಲಿ ಕುಟುಂಬ ರಾಜಕಾರಣ ಬಗ್ಗೆ ಪ್ರಸ್ತಾಪಿಸಿ ಚಿಂಚನಸೂರ್, ದೇವೇಗೌಡರಿಗೆ 224 ಮೊಮ್ಮಕ್ಕಳಿದ್ದಿದ್ದರೆ ಎಲ್ಲ ಕ್ಷೇತ್ರಗಳಲ್ಲಿ ಅವರೇ ಸ್ಪರ್ಧೆ ಮಾಡುತ್ತಿದ್ದರು. ಆದ್ರೆ ಅಷ್ಟು ಮಂದಿ ಯಾಕೆ ಮೊಮ್ಮಕ್ಕಳಿಲ್ಲ ಅಂತ ಅವರು ಚಿಂತೆ ಮಾಡುತ್ತಿದ್ದಾರೆ. ಅಲ್ಲದೆ ಕಲಬುರಗಿಯಲ್ಲಿಯೂ ತಂದೆ, ಮಗ ಅಷ್ಟೇ ಇರಬೇಕು ಅಂತಾ ಎಲ್ಲರನ್ನೂ ಹೊರಗೆ ಹೋಗೋ ಹಾಗೇ ಮಾಡಿದ್ದಾರೆ ಅಂತ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಬಾಬುರಾವ್ ಚಿಂಚನಸೂರು ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಈ ಬಾರಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಲಾಗುವುದು ಎಂದು ಭರವಸೆಯನ್ನು ನೀಡಿದರು.