Sunday, 22nd September 2019

ಬಾಹುಬಲಿ-2 ಟ್ರೇಲರ್ ಬಿಡುಗಡೆಗೆ ಫಿಕ್ಸ್ ಆಯ್ತು ಮುಹೂರ್ತ

ಹೈದ್ರಾಬಾದ್: ದೇಶದ ಬಹುನಿರೀಕ್ಷಿತ ಚಿತ್ರ ಬಾಹುಬಲಿ-2 ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು ಅಂದ್ರೆ ಮಾರ್ಚ್ 16ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ರಾಜಮೌಳಿ ಆಂಡ್ ಟೀಂ ರೆಡಿಯಾಗಿದೆ.

ಮಾರ್ಚ್ 16 ರಂದು ಆಂಧ್ರಪ್ರದೇಶ ಹಾಗು ತೆಲಂಗಾಣ ರಾಜ್ಯಗಳ ಚಿತ್ರಮಂದಿರಗಳಲ್ಲಿ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಬೆಳಗ್ಗೆ 9 ಗಂಟೆಯಿಂದ 10 ಗಂಟೆ ಸಮಯದ ಮಧ್ಯದಲ್ಲಿ ಟ್ರೇಲರ್‍ನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು. ಇನ್ನೂ ಟ್ರೇಲರ್‍ನ್ನು ಅದೇ ದಿನ ಸಂಜೆ 5 ಗಂಟೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ರಿಲೀಸ್ ಮಾಡಲಾಗುತ್ತದೆ.

ಇದನ್ನೂ ಓದಿ: ಬಾಹಬಲಿಯನ್ನು ಕೊಂದಿದ್ದು ಯಾಕೆ? ಕೊನೆಗೂ ಉತ್ತರ ಹೇಳಿದ ಕಟ್ಟಪ್ಪ!

ಬಾಹುಬಾಲಿಯ ಮೊದಲ ಭಾಗದ ಟ್ರೇಲರ್‍ನ ಪ್ರಾಮುಖ್ಯತೆಯನ್ನು ಇದಕ್ಕೂ ನೀಡಲಾಗಿದೆ. ಮೊದಲ ಭಾಗದ ಚಿತ್ರದ ಟ್ರೇಲರ್‍ಗೆ ಬಳಸಿದ ತಂತ್ರಜ್ಞಾನ ಮತ್ತು ಫ್ಯಾಶನ್ ಈ ಟ್ರೇಲರ್‍ನಲ್ಲಿ ಬಳಸಿದ್ದೇವೆ ಎಂದು ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

ಬಾಹುಬಲಿ-2 ಪ್ರಭಾಸ್, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್ ಮುಂತಾದ ದೊಡ್ಡ ತಾರಾಗಣವನ್ನು ಚಿತ್ರತ ಹೊಂದಿದೆ. ಬಾಹುಬಲಿ-2 ತೆಲಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಪ್ರಿಲ್ 28 ರಂದು ತೆರೆಕಾಣಲಿದೆ.

ಇದನ್ನೂ ಓದಿ: ಮೋದಿ ಜೊತೆ ಬಾಹುಬಲಿ ಚಿತ್ರವನ್ನು ನೋಡಲಿದ್ದಾರಾ ಇಂಗ್ಲೆಂಡಿನ ರಾಣಿ?

 

Leave a Reply

Your email address will not be published. Required fields are marked *