Districts
ವಿಜಯೇಂದ್ರನ ಶಿಷ್ಯರು ಶಾಸಕರ ನಕಲಿ ಸಿಡಿ ಮಾಡ್ತಾರೆ: ಯತ್ನಾಳ್

– ದಾಲ್ ಮೇ ಕುಚ್ ಕಾಲಾ ಹೈ
ವಿಜಯಪುರ: ಸಿಎಂ ಪುತ್ರ ಬಿ.ವೈ.ವಿಜಯೇಂದ್ರನ ಶಿಷ್ಯರು ಕೆಲ ಶಾಸಕರ ನಕಲಿ ಸಿಡಿ ಮಾಡುವ ಕೆಲಸ ಮಾಡ್ತಾರೆ ಅಂತ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಕೇವಲ ಮಂತ್ರಿ ಆಗಲು ಯತ್ನಾಳ್ ಟೀಕೆ ಮಾಡುತ್ತಿದ್ದಾನೆ ಅನ್ನೋ ತಪ್ಪು ಸಂದೇಶ ರವಾನಿಸುವ ಕೆಲಸವನ್ನ ಸಚಿವರಾದ ಜಗದೀಶ್ ಶೆಟ್ಟರ್ ಮತ್ತು ಕೆ.ಎಸ್.ಈಶ್ವರಪ್ಪ ಮಾಡುತ್ತಿದ್ದಾರೆ. ನಾನು ಎಂದೂ ಯಾರ ಬಳಿಯೂ ಮಂತ್ರಿ ಮಾಡಿ ಎಂದು ಬಯೋಡೇಟಾ ಹಿಡಿದು ಹೋದವನು ನಾನಲ್ಲ. ಈಶ್ವರಪ್ಪ ಬಳಿ ಆ ರೀತಿಯ ದಾಖಲೆಗಳಿದ್ರೆ ಬಿಡುಗಡೆ ಮಾಡಲಿ. ಶೆಟ್ಟರ್ ಅವರನ್ನ ಮಂತ್ರಿಯಾದ್ಮೇಲೆ ಒಮ್ಮೆ ಮಾತ್ರ ಭೇಟಿಯಾಗಿದ್ದೇನೆ. ಶೆಟ್ಟರ್ ಸೋದರನ ಜೊತೆ ಸೇರಿ ಏನು ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.
ವಿಜಯಪುರ ನಗರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಕೇಳಿದ್ದೆ. ಅಂದು ಅವರೇ 23 ಕೋಟಿ ತತಕ್ಷಣ ಬಿಡುಗಡೆ ಮಾಡಬೇಕೆಂದು ಹೇಳಿದರು. ಆದ್ರೆ ಹಣಕಾಸಿನ ಕಚೇರಿಯಲ್ಲಿ ಹಣ ನೀಡಲ್ಲ. ಬಿಜೆಪಿ ಶಾಸಕರಿಗೆ ಹಣ ನೀಡದಂತೆ ಅವರೇ ಹೇಳಿದ್ದಾರಂತೆ. ಆದ್ರೆ ವಿರೋಧ ಪಕ್ಷದ ನಾಯಕರಿಗೆ ನೂರು ನೂರು ಕೋಟಿ ಹಣ ನೀಡಿದ್ಯಾಕೆ ಅಂತ ಪ್ರಶ್ನೆ ಮಾಡಿದರು.
ಸಿಎಂ ಯಡಿಯೂರಪ್ಪನವರ ಮನೆಯಲ್ಲೇ ಒಂದು ಟೀಂ ಇದೆ. ವಿಜಯೇಂದ್ರನ ಶಿಷ್ಯರು ಕೆಲ ಶಾಸಕರದ್ದು ಇದೇ ರೀತಿ ನಕಲಿ ಸಿಡಿ ಮಾಡ್ತಾರೆ. ವಿಜಯೇಂದ್ರ ಬಳಿ ಯಾರ ಯಾರದ್ದು ಸಿಡಿ ಇದೆ ಅಂತ ನನಗೆ ಗೊತ್ತಿದೆ. ಸಮಯ ಬಂದಾಗ ಎಲ್ಲ ವಿಷಯವನ್ನ ದಾಖಲೆ ಸಮೇತ ಹೇಳುತ್ತೇನೆ. ಇಂದು ಅಮಿತ್ ಶಾ ಬಳಿ ಯಾವುದೇ ದೂರು ಸಲ್ಲಿಸಲ್ಲ. ದೆಹಲಿಗೆ ತೆರಳಿ ಈ ಬಗ್ಗೆ ಮಾತನಾಡುತ್ತೇನೆ ಎಂದರು.
