Thursday, 17th October 2019

Recent News

ಬೆಳಗ್ಗೆ ಹೈ ವೋಲ್ಟೇಜ್ ಪ್ರತಿಭಟನೆ ಬಳಿಕ ಇಂಡೋ-ಪಾಕ್ ಮ್ಯಾಚ್ ನತ್ತ ಬಿಎಸ್‍ವೈ

ಮೈಸೂರು: ಇಂದು ಬೆಳಗ್ಗೆ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಪ್ರತಿಭಟನೆ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂಜೆ ಹೈವೋಲ್ಟೇಜ್ ಇಂಡೋ-ಪಾಕ್ ಮ್ಯಾಚ್ ವೀಕ್ಷಣೆಯಲ್ಲಿ ತೊಡಗಿದ್ದಾರೆ.

ಮೈಸೂರಿನ ದಿ ಪ್ರೆಸಿಡೆಂಟ್ ಹೋಟೆಲ್ ಮೇಲ್ಭಾಗದ ರೂಫ್ ಟಾಪ್ ಗಾರ್ಡನ್ ನಲ್ಲಿ ಬೃಹತ ಪರದೆಯಲ್ಲಿಯಲ್ಲಿ ಯಡಿಯೂರಪ್ಪನವರು ಪಂದ್ಯ ವೀಕ್ಷಿಸುತ್ತಿದ್ದಾರೆ. ಯಡಿಯೂರಪ್ಪರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ರಾಜೇಂದ್ರ ಸಾಥ್ ನೀಡಿದ್ದು, ಟೀ-ಸ್ನಾಕ್ಸ್ ಜೊತೆ ಪಂದ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಉಳಿದಂತೆ ಮೈಸೂರಿನ ಬಿಜೆಪಿ ಮುಖಂಡ ರಾಜೀವ್ ಸೇರಿದಂತೆ ಹಲವು ಕಾರ್ಯಕರ್ತರು ಸಹ ಯಡಿಯೂರಪ್ಪರ ಜೊತೆ ಇಂಡೋ-ಪಾಕ್ ಪಂದ್ಯ ವೀಕ್ಷಣೆಯಲ್ಲಿ ಬ್ಯುಸಿಯಾಗಿದ್ದಾರೆ.

ಟಾಸ್ ಗೆದ್ದು ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಎಚ್ಚರಿಕೆ ಆಟವಾಡಿದರು. ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ (140 ರನ್, 78 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ರಾಹುಲ್, ನಾಯಕ ಕೊಹ್ಲಿರ ಅರ್ಧ ಶತಕಗಳ ನೆರವಿನಿಂದ ಟೀಂ ಇಂಡಿಯಾ 46.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿದ್ದು, ಈ ನಡುವೆ ವರುಣ ಪಂದ್ಯಕ್ಕೆ ಅಡ್ಡಿ ಪಡಿಸಿದ್ದಾನೆ.

Leave a Reply

Your email address will not be published. Required fields are marked *