Connect with us

Bengaluru City

ಬಾರಿನಲ್ಲಿ ಗುರಾಯಿಸಿದ್ದಕ್ಕೆ ಅಟ್ಟಾಡಿಸಿಕೊಂಡು ದುಷ್ಕರ್ಮಿಗಳಿಂದ ಹಲ್ಲೆ

Published

on

ಬೆಂಗಳೂರು: ಬಾರಿನಲ್ಲಿ ಗುರಾಯಿಸಿದ್ದಕ್ಕೆ ದುಷ್ಕರ್ಮಿಗಳು ಆಟೋ ಚಾಲಕನನನ್ನು ಅಟ್ಟಾಡಿಸಿಕೊಂಡು ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಯೊಂದು ನಗರದ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ರಾಘವನಗರದಲ್ಲಿ ನಡೆದಿದೆ.

ಸತೀಶ್ ಹಲ್ಲೆಗೊಳಗಾದ ಆಟೋ ಚಾಲಕ. ಬಾರಿನಲ್ಲಿದ್ದಾಗ ಸತೀಶ್ ದುಷ್ಕರ್ಮಿಗಳನ್ನು ಗುರಾಯಿಸಿದ್ದಾರೆ. ಇದರಿಂದ ಕೋಪಗೊಂಡ ಪುಡಿ ರೌಡಿಗಳು ಗುರುವಾರ ರಾತ್ರಿ ಸುಮಾರು 10.45ಕ್ಕೆ ಸತೀಶ್‍ರನ್ನು ಅಟ್ಟಾಡಿಸಿಕೊಂಡು ಹೋಗಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಸತೀಶ್ ಗಿರಿನಗರದ ಪಲ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪೊಲೀಸರು ಸತೀಶ್ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಂತರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ ಜೋಗಯ್ಯ, ಪಿನಿತ್, ವಿಕ್ಕಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.